Internal reservation :ಶಿವಮೊಗ್ಗ: ಒಳಮೀಸಲಾತಿ ವರದಿಯಲ್ಲಿ ಬಂಜಾರ, ಭೋವಿ, ಕೊರಮ, ಮತ್ತು ಕೊರಚ ಜಾತಿಗಳಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಿದ್ದು, ಅದನ್ನು ಶೇಕಡಾ 5ಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್. ಆಗ್ರಹಿಸಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಸ್ಟ್ 04 ರಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದಿಂದ ಒಳಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರಲ್ಲಿ ನಮ್ಮ ಬಂಜಾರ ಜಾತಿ ಸೇರಿದಂತೆ ಇತರೆ ಜಾತಿಗಳಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಲಾಗಿದ್ದು, ಅದು ನಮ್ಮಲ್ಲಿ ಆತಂಕವನ್ನು ಸೃಷ್ಟಿಸಿದೆ, ನಮ್ಮ ಜಾತಿಯಲ್ಲಿಯೂ ಸಹ ಆರ್ಥಿಕವಾಗಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಬಹಳಷ್ಟು ಜನ ಇದ್ದಾರೆ, ಹಾಗಾಗಿ ಇಂತಹ ಮಾನದಂಡದ ಆದಾರದ ಮೇಲೆ ಆಯೋಗ ಸ್ವಲ್ಪ ಮಾರ್ಪಾಡು ಮಾಡಿ ನಮ್ಮ ಜಾತಿಗಳಿಗೆ ಶೇ 5 ರಷ್ಟು ಮೀಸಲಾತಿಯನ್ನು ನೀಡಬೇಕು ಎಂದರು.
Internal reservation :’ಸ್ಪೃಶ್ಯ-ಅಸ್ಪೃಶ್ಯ’ ಪದ ಬಳಕೆ ಖಂಡನೆ
ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಗುಂಪು 4 ರಲ್ಲಿ ಬಂಜಾರ ಭೋವಿ ಕೊರಚ ಮತ್ತು ಕೊರಮ ಜಾತಿಗಳನ್ನು ಅಸ್ಪೃಶ್ಯರಲ್ಲದ ಜಾತಿಗಳು ಎಂದು ನಮೂದಿಸಿದ್ದು, ಅವರು ಕೂಡಲೇ ಈ ಪದಗಳನ್ನು ಕೈ ಬಿಡಬೇಕು. ಸಂವಿದಾನದಲ್ಲಿಯೂ ಸಹ ಈ ಪದವನ್ನು ಬಳಸಲಾಗಿಲ್ಲ. ಹಾಗಾಗಿ ಇವರು ಬಳಸುವುದನ್ನು ನಿಲ್ಲಿಸಬೇಕು ಎಂದರು. ಹಾಗೆಯೇ ಸಮೀಕ್ಷೆಯಲ್ಲಿ ಬಂಜಾರ ವಸತಿ ಕುಟುಂಬಗಳನ್ನು ಹೊರಗೆ ಇಟ್ಟಿದ್ದು,ಅದನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
