ಶಿವಮೊಗ್ಗ ಪೊಲೀಸರನ್ನು ಮೆಚ್ಚಿಕೊಳ್ಳಲು ಕಾರಣವಾಯ್ತು @3 ಸ್ಟೋರಿ!

ajjimane ganesh

helping nature of shivamogga police  ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ನಡೆಯುತ್ತಿದೆ. ಅವುಗಳನ್ನು ಗುರುತಿಸುವ ನಿಟ್ಟಿನಲ್ಲಿ ಈ ಸುದ್ದಿ ನಮ್ಮೂರ ಪೊಲೀಸರ ಬಗೆಗಿನದ್ದು! ಸಣ್ಣಪುಟ್ಟ ಘಟನೆಯಲ್ಲಿಯು ಮಾನವೀಯತೆ ತೋರುತ್ತಿರುವ ಶಿವಮೊಗ್ಗ ಪೊಲೀಸ್ ಸಿಬ್ಬಂದಿಯ ಕೆಲಸಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಹೊಳೆಹೊನ್ನೂರು ಪೊಲೀಸ್ ಸಿಬ್ಬಂದಿಯೊಬ್ಬರು ಸಾಕ್ಷಿಯಾಗಿದ್ದರು. ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅಡಿಯಲ್ಲಿ ಮನೆಯೊಂದಕ್ಕೆ ತೆರಳಿದಾಗ ಅವರ ಕಣ್ಣಿಗೆ ಅನಾಥ ಮಕ್ಕಳಿಬ್ಬರು ಕಾಣಿಸಿದ್ಧಾರೆ. ಅವರನ್ನು ಸುರಕ್ಷಿತವಾಗಿ ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಸೇರಿಸಿ ಆಸರೆ ಒದಗಿಸಿದ್ದಾರೆ. ಅವರ ಈ ಮಾನವೀಯ ಕೆಲಸವನ್ನು ಗಮನಿಸಿದ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಸಿಬ್ಬಂದಿಯನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. 

ಈ ಘಟನೆ ಪೂರ್ತಿ ವಿವರ ಇಲ್ಲಿದೆ : ಮನೆ ಮನೆಗೆ ಬರುತ್ತಿರುವ ಪೊಲೀಸರಿಂದ 2 ಜೀವಕ್ಕೆ ಸಿಕ್ಕಿತು ಆಸರೆ! ಹೇಗೆ ಗೊತ್ತಾ https://malenadutoday.com/shivamogga-police-save-children-in-holehonnuru/ 

- Advertisement -

helping nature of shivamogga police

 

Malenadu Today

ಕಳೆದಿದ್ದ ಪರ್ಸ್​ ಹುಡುಕಿಕೊಟ್ಟ ಸಿಬ್ಬಂದಿ

ಇತ್ತ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಗಸ್ತು ಸಮಯದಲ್ಲಿ ಪರ್ಸ್​ವೊಂದು ಸಿಕ್ಕಿತ್ತು. ಅದರಲ್ಲಿ ಒಂದಿಷ್ಟು ದುಡ್ಡು ಸಹ ಇತ್ತು. ಯಾರೋ ಕಳೆದುಕೊಂಡಿದ್ದಾರೆ ಎಂಬುದು ಖಾತರಿಯಾದ ತಕ್ಷಣ ಅದನ್ನು ತಮ್ಮ ಜೊತೆ ಇಟ್ಟುಕೊಂಡ ಸಿಬ್ಬಂದಿ ಆನಂತರ ಅದರ ಮಾಲೀರನ್ನ ಪತ್ತೆ ಮಾಡಿ ಪರ್ಸ್​ ವಾಪಸ್​ ನೀಡಿದ್ದಾರೆ. ಟಿ. ಮಂಜುನಾಥ್ ರ ಕೆಲಸಕ್ಕೆ ಇದೀಗ ಶ್ಲಾಘನೆ ವ್ಯಕ್ತವಾಗುತ್ತಿದೆ. ಜನರ ಮನಸ್ಸು ಗೆಲ್ಲುವುದಕ್ಕೆ ದೊಡ್ಡ ಸಾಧನೆಯೇ ಮಾಡಬೇಕೆಂದಿಲ್ಲ. ನಾವು ನಮಗೆ ಗೊತ್ತಿಲ್ಲದಂತೆ ಮಾಡುವ ಸಣ್ಣ ಉಪಕಾರವೂ ಬೇಶ್ ಎನಿಸಿಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.  

helping nature of shivamogga police

Malenadu Today

ಬಸ್​ ಸ್ಟಾಂಡ್​ನಲ್ಲಿ ಸಿಕ್ಕ ಚಿನ್ನ ತಂದುಕೊಟ್ಟ ಮಹಿಳೆ

ಇತ್ತ  ಹೊಸನಗರ ತಾಲೂಕಿನ ಕೋಡೂರು ಬಳಿಯಲ್ಲಿ ಸಿಕ್ಕ ಚಿನ್ನವೊಂದನ್ನ ಅದರ ಮಾಲೀಕರಿಗೆ ಒದಗಿಸುವಂತೆ ಪೊಲೀಸರಿಗೆ ಮಹಿಳೆಯೊಬ್ಬರು ನೀಡಿದ್ದರು. ಅವರ ಪ್ರಾಮಾಣಿಕತೆಯನ್ನು ಕಂಡು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಅಮ್ಮನಘಟ್ಟ ಬಸ್ ನಿಲ್ದಾಣದಲ್ಲಿ ಚಿನ್ನದ ಚೈನ್‌ ಸರವೊಂದು ಶಿಕ್ಷಕಿ ಪಾರ್ವತಿಬಾಯಿ ಎಂಬುವರಿಗೆ ಸಿಕ್ಕಿತ್ತು.  ಅದನ್ನು  ಅವರು ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಮೂಲಕ ಠಾಣೆಗೆ ತಲುಪಿಸಿದ್ದರು. ಆ ಬಳಿಕ ಅದರ ಮಾಲೀಕರನ್ನು ಪತ್ತೆಮಾಡಿದ ಪೊಲೀಸರು ಚಿನ್ನವನ್ನು ವಾಪಸ್ ನೀಡಿದ್ಧಾರೆ. 

helping nature of shivamogga police
helping nature of shivamogga police

helping nature of shivamogga police

Share This Article