Headmaster Dies in Tragic Bike Accident Near Ripponpet, Shivamogga ಶಿವಮೊಗ್ಗ: ರಿಪ್ಪನ್‌ಪೇಟೆ ಬಳಿ ಭೀಕರ ಬೈಕ್ ಅಪಘಾತ, ಮುಖ್ಯಶಿಕ್ಷಕ ಸಾವು
Hosanagara news / ರಿಪ್ಪನ್‌ಪೇಟೆ, ಶಿವಮೊಗ್ಗ ಜಿಲ್ಲೆ: ರಿಪ್ಪನ್‌ಪೇಟೆ ಸಮೀಪದ ಶಿವಮಂದಿರ ಬಳಿ ನಿನ್ನೆ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೇಷ್ಟ್ರೊಬ್ಬರು ಮೃತಪಟ್ಟಿದ್ದಾರೆ. ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕರಾದ ಮಂಜಯ್ಯ ಟಿ. (59) ಮೃತರಾಗಿದ್ದಾರೆ.

ಘಟನೆಯ ವಿವರ:
ಹರಮಘಟ್ಟ ಮೂಲದವರಾದ ಮಂಜಯ್ಯ ಟಿ. ಅವರು ಕಳೆದ 20 ವರ್ಷಗಳಿಂದ ಅರಸಾಳು ಗ್ರಾಮದಲ್ಲಿ ನೆಲೆಸಿದ್ದರು. ತಮಡಿಕೊಪ್ಪ, ನೇರಲಮನೆ, ಮತ್ತು ಕೋಟೆತಾರಿಗ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.. ಮಂಗಳವಾರ ಸಂಜೆ ತಮ್ಮ ಕರ್ತವ್ಯ ಮುಗಿಸಿ ಬೈಕ್‌ನಲ್ಲಿ ಅರಸಾಳು ಕಡೆಗೆ ತೆರಳುತ್ತಿದ್ದಾಗ, ಶಿವಮೊಗ್ಗ ರಸ್ತೆಯ ಶಿವಮಂದಿರ ಹತ್ತಿರ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಇವರ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಮಂಜಯ್ಯ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನೊಂದು ಬೈಕ್‌ನಲ್ಲಿದ್ದ ವ್ಯಕ್ತಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ದುರ್ಘಟನೆಯ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಶಿಕ್ಷಕ ಮಂಜಯ್ಯ ಅವರ ಅಕಾಲಿಕ ಮರಣಕ್ಕೆ ಸ್ಥಳೀಯರು ಮತ್ತು ಶಾಲಾ ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Headmaster Dies in Tragic Bike Accident 09