SHIVAMOGGA | MALENADUTODAY NEWS | ಮಲೆನಾಡು ಟುಡೆ Oct 23, 2024
ಹೊನ್ನಾಳಿ ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ರೈತರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿಕುಮಾರ್ (42) ಮೃತ ರೈತ. ಜಮೀನೊಂದನ್ನು ಕೇಣಿಗೆ ಪಡೆದು ಕೃಷಿ ಮಾಡುತ್ತಿದ್ದ ರವಿಕುಮಾರ್‌ರಿಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮಸ್ಯೆ ತಂದಿಟ್ಟಿತ್ತು. ಹಾಗಾಗಿ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗದ ಇವರು ಸಾಲ ತೀರಿಸಲು ಮನೆ ಅಡವಿಟ್ಟಿದ್ದರು. ಈ ಸಂಬಂಧ ಬ್ಯಾಂಕ್‌ನಿಂದ ನೋಟಿಸ್ ಬಂದಿತ್ತು.
ಬೈಕ್ ಸಮೇತ ಅಸ್ಥಿಪಂಜರ ಪತ್ತೆ
ದಾವಣಗೆರೆಯ ಅಣಜಿ ಕೆರೆ ಬಳಿ ಬೈಕ್ ಹಾಗೂ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಇದು ಕಡ್ಲೇಬಾಳು ಗ್ರಾಮದ ತಿಪ್ಪೇಶ ಎಂಬವರ ಅಸ್ಥಿಪಂಜರ ಎನ್ನಲಾಗುತ್ತಿದೆ. ಈತ 15 ದಿನದಿಂದ ನಾಪತ್ತೆಯಾಗಿದ್ದ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಮೃತದೇಹ ಪತ್ತೆಯಾಗಿದೆ. ಈತನ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಇದು ಕೊಲೆಯೋ ಅಪಘಾತವೋ ಎಂಬುದನ್ನ ಪೊಲೀಸರು ಪತ್ತೆ ಹಚ್ಚಬೇಕಾಗಿದೆ.
ಕಾಡು ಕೋಣ ಹತ್ಯೆ
ಭದ್ರಾವತಿಯಲ್ಲಿ ಅರಣ್ಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾಡುಕೋಣವೊಂದನ್ನ ಹತ್ಯೆ ಮಾಡಿ ಜಮೀನಿನಲ್ಲಿ ಹೂತಿಟ್ಟಿದ್ದ ಪ್ರಕರಣವೊಂದನ್ನ ಅರಣ್ಯ ಇಲಾಖೆ ಸಿಬ್ಬಂದಿ ಭೇದಿಸಿದ್ದಾರೆ. ಅಲ್ಲದೆ ಈ ಸಂಬಂಧ ಶ್ರೀನಿವಾಸಪುರದ ಶಿವರಾಮ, ಉಕ್ಕುಂದದ ರಂಗ ಸ್ವಾಮಿಯನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.
SUMMARY | Shivamogga, Honnali, Farmer, Bhadravathi, Davanagere, Skeleton, Wild Buffalo, Shivamogga Fast News
KEYWORDS |Shivamogga, Honnali, Farmer, Bhadravathi, Davanagere, Skeleton, Wild Buffalo, Shivamogga Fast News