ಕಾಸ್ಮೋ ಕ್ಲಬ್​ಗೆ ಹೋಗಿ ವಾಪಸ್​ ಬರುವಾಗ ಆಘಾತ! ಓವರ್​ ಟೇಕ್ ಮಾಡಿ ಕಾರನ್ನ ಅಡ್ಡಗಟ್ಟಿ ಹಲ್ಲೆ! ಯಾರವರು!?

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4  2025: ಅಬ್ಬಲಗೆರೆಯಲ್ಲಿ ಬರ್ತಡೆ ಪಾರ್ಟಿ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣ ಒಂದು ಕಡೆಯಾದರೆ, ಇತ್ತ ಶಿವಮೊಗ್ಗ ವಿನೋಬನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಅಣ್ಣನ ಮಗನ ಬರ್ತ್​ಡೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಕಾರೊಂದನ್ನ ತಡೆದು, ಕಾರಲ್ಲಿದ್ದವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ : THE BHARATIYA NYAYA SANHITA (BNS), 2023 (U/s-126(1),352,115(2),74,189(2),191(2),190) ಅಡಿಯಲ್ಲಿ ಕೇಸ್ ಆಗಿದೆ.

ನಡೆದ ಘಟನೆಯನ್ನು ಗಮನಿಸುವುದಾದರೆ, ಸೆಪ್ಟೆಂಬರ್​ 28 ನೇ ತಾರೀಖು ಶರಾವತಿ ನಗರದ ನಿವಾಸಿಯೊಬ್ಬರು ಮಲ್ಲಿಗೇನಹಳ್ಳಿಯಲ್ಲಿರುವ  ಕಾಸ್ಮೋ ಕ್ಲಬ್​ನಲ್ಲಿ ಆಯೋಜಿಸಲಾಗಿದ್ದ ಅವರ ಅಣ್ಣನ ಮಗನ ಬರ್ತಡೆ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಅವರು ಎಪಿಎಂಸಿ ಸಮೀಪ ಬರುತ್ತಿರುವಾಗ ರಾತ್ರಿ ಸುಮಾರು 9.45 ರ ಹೊತ್ತಾಗಿತ್ತು.

- Advertisement -

ಈ ವೇಳೆ ದೂರುದಾರರು ಇದ್ದ ಕಾರನ್ನ ಓವರ್​ ಟೇಕ್ ಮಾಡಿ ಅಡ್ಡಗಟ್ಟಿದ ಇನ್ನೋವಾ ಕಾರೊಂದರಿಂದ ಇಳಿದ ಅಪರಿಚಿತರು, ಏಕಾಯೇಕಿ ದೂರುದಾರರು ಹಾಗೂ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. 

ಇಷ್ಟೆ ಅಲ್ಲದೆ ಎಪಿಎಂಸಿ ಗೇಟ್ ಬಳಿ ಹಲ್ಲೆ ಮಾಡಿದ್ದನ್ನ ಪ್ರಶ್ನಿಸಿಲು ಹೋಗಿದ್ದ ಸಂದರ್ಭದಲ್ಲಿ ಪುನಃ ಆರೋಪಿಗಳು ಬೈಕ್​ನಲ್ಲಿ ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ ಈ ಸಂದರ್ಭದಲ್ಲಿ 20 ಗ್ರಾಮ್​ನ ಚಿನ್ನದ ಸರ ಕೂಡ ಕಾಣೆಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ದೂರುದಾರರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದು, ಅವರ ಹೇಳಿಕೆಯಂತೆ ಎಫ್​ಐಆರ್ ದಾಖಲಾಗಿದೆ. 

ಇದನ್ನು ಸಹ ಓದಿ :  ಸಿನಿಮಾ ಟಿಕೆಟ್​ ಎಸೆಯದಿರಿ ದುಡ್ಡು ವಾಪಸ್​ ಬರಬಹುದು, ಇ-ಪೇಪರ್​ ಓದಿ 

Family Attacked After Birthday Celebration in apmc shivamogga
Family Attacked After Birthday Celebration in apmc shivamogga

Family Attacked After Birthday Celebration in apmc shivamogga 

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ ಪೊಲೀಸ್ ಠಾಣೆ, ಸಿಗಂದೂರು ಹೋಟೆಲ್ ಹತ್ತಿರ, ಮೆಗ್ರಾನ್ ಆಸ್ಪತ್ರೆ,Shivamogga assault, Gold chain robbery, Innova car attack, Family attacked, APMC Sagar Road, Birthday party incident, FIR registered

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *