fake note bhadravathi / ₹500, ₹200, ₹100, ₹50 ರ ನಕಲಿ ನೋಟಿನ ವಹಿವಾಟು, ಸಿಕ್ಕಿಬಿದ್ದ ರಿಯಲ್​ ಎಸ್ಟೇಟ್ ಉದ್ಯಮಿ! ನಿಮ್ಮ ಹತ್ತಿರ ಈ ಸೀರಿಸ್​ ನೋಟಿದ್ರೆ ಪೊಲೀಸರಿಗೆ ತಿಳಿಸಿ

Malenadu Today

fake note bhadravathi  ಭದ್ರಾವತಿಯಲ್ಲಿ ನಕಲಿ ನೋಟು ದಂಧೆ ಪತ್ತೆ: ಓರ್ವನ ಬಂಧನ, ಲಕ್ಷಾಂತರ ರೂ. ನಕಲಿ ನೋಟು ವಶ

ಶಿವಮೊಗ್ಗ: ಭದ್ರಾವತಿ ನಗರದಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ, ನಕಲಿ ನೋಟುಗಳು ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ: fake note bhadravathi 

ದಿನಾಂಕ 13-06-2025 ರಂದು, ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೂಲಿಬ್ಲ್ಯಾಕ್​  ಶೆಡ್‌ನ ನಿವಾಸಿ, 25 ವರ್ಷದ ಅಜಯ್ ಎಂಬುವವರು  ಭದ್ರಾವತಿ ನ್ಯೂಟೌನ್ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಜೂನ್ 12, 2025 ರಂದು ಸಂಜೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಡಿಸ್ಕವರ್ ಬೈಕ್‌ನಲ್ಲಿ ಬಂದು, 500 ರೂಪಾಯಿ ಮುಖಬೆಲೆಯ ನಕಲಿ ನೋಟು ಕೊಟ್ಟು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ದೂರಿನ ಅನ್ವಯ, ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ   ಕಲಂ: 179, 318(4) BNS Act ಅಡಿಯಲ್ಲಿ ಕೇಸ್​ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

fake note bhadravathi 
fake note bhadravathi

ಪೊಲೀಸ್ ತಂಡದ ಕಾರ್ಯಾಚರಣೆ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಮಿಥುನ್ ಕುಮಾರ್ ಜಿ. ಕೆ. ಐಪಿಎಸ್  ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಭದ್ರಾವತಿ ಉಪವಿಭಾಗದ ಡಿವೈಎಸ್‌ಪಿ ನಾಗರಾಜ ಡಿ. ಮತ್ತು ಭದ್ರಾವತಿ ನಗರ ವೃತ್ತದ ಸಿಪಿಐ (ಪ್ರಭಾರ) ಮಂಜುನಾಥ್ ಸಿ. ರವರ ಮೇಲ್ವಿಚಾರಣೆಯಲ್ಲಿ, ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್‌ಐ  ಟಿ. ರಮೇಶ್ ಅವರ ನೇತೃತ್ವದಲ್ಲಿ ಎಎಸ್‌ಐ ಟಿ.ಪಿ. ಮಂಜಪ್ಪ, ಹೆಚ್‌ಸಿ ನವೀನ್, ಸಿ.ಹೆಚ್.ಸಿ. ವಿಜಯ್ ಹೆಚ್.ವೈ, ಸಿ.ಹೆಚ್.ಸಿ. ಶ್ರೀಧರ್, ಸಿಪಿಸಿ ಮಾರುತಿ ಪಾಟೀಲ, ಸಿಪಿಸಿ ಪ್ರಸನ್ನ, ಸಿಪಿಸಿ ರಘು ಬಿ.ಎಂ, ಮತ್ತು ಸಿಪಿಸಿ ನಾಗರಾಜಪ್ಪ ಬಿ.ಹೆಚ್. ಒಳಗೊಂಡ ತಂಡ ನಕಲಿ ನೋಟಿನ ಜಾಲವನ್ನು ಭೇದಿಸಲು ಮುಂದಾಗಿದ್ದರು. 

ಆರೋಪಿ ಬಂಧನ ಮತ್ತು ನಕಲಿ ನೋಟು ವಶ:fake note bhadravathi 

ಕೇವಲ ನಾಲ್ಕು ದಿನಗಳ ಅಂತರದಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯಾದ ರಂಗೇಗೌಡ (57 ವರ್ಷ,  ಭದ್ರಾವತಿ) ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಯಿಂದ 500 ರೂಪಾಯಿ ಮುಖಬೆಲೆಯ 13 ನಕಲಿ ನೋಟುಗಳು, 200 ರೂಪಾಯಿ ಮುಖಬೆಲೆಯ 1 ನಕಲಿ ನೋಟು, 100 ರೂಪಾಯಿ ಮುಖಬೆಲೆಯ 1 ನಕಲಿ ನೋಟು, 50 ರೂಪಾಯಿ ಮುಖಬೆಲೆಯ 1 ನಕಲಿ ನೋಟು ಮತ್ತು ಕೃತ್ಯಕ್ಕೆ ಬಳಸಿದ ಡಿಸ್ಕವರ್ ಬೈಕ್ ಅನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.

fake note bhadravathi 
fake note bhadravathi

ಈ ನಡುವೆ ಆರೋಪಿ ರಂಗೇಗೌಡ, ತಾನು ಬೇರೆಡೆಗಳಲ್ಲೂ ಇಂತಹ ಮೋಸದ ವ್ಯವಹಾರಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. OFP 790829 ಮತ್ತು 9TV 978202 ಸರಣಿ ಸಂಖ್ಯೆಗಳ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಎಲ್ಲಿಯಾದರೂ ಕಂಡುಬಂದಲ್ಲಿ, ಸಾರ್ವಜನಿಕರು ತಕ್ಷಣ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

 

fake note bhadravathi 
fake note bhadravathi

 

Share This Article