elephant naming ceremony Sakrebailu Elephant Camp ಶಿವಮೊಗ್ಗ ,malenadu today news : ಶಿವಮೊಗ್ಗದ ವನ್ಯಜೀವಿ ವಲಯದಲ್ಲಿ ಇವತ್ತು ಒಂಥರಾ ವಿಶೇಷ ಸಂಭ್ರಮ ಮನೆ ಮಾಡಿತ್ತು. ಏಕೆಂದರೆ ಮಲೆನಾಡ ಕಾಡುಮನೆಯಲ್ಲಿಂದು ನಾಮಕರಣದ ಸಡಗರವಿತ್ತು. ಆಮಂತ್ರಣ ವಿಶ್ವ ಆನೆಗಳ ದಿನಾಚರಣೆಯ ದಿನವೇ ನೀಡಿತ್ತು. ಹಾಗಾಗಿ ಮೂಕ ಜೀವಿಗಳ ಮುದ್ದಾಟ ನೋಡುತಾ ಅವುಗಳಿಗೆ ಹೆಸರಿಡುವ ಕಾರ್ಯಕ್ರಮ ನೋಡಲೆಂದೆ ಸಕ್ರೆಬೈಲ್ ಆನೆ ಬಿಡಾರಕ್ಕೆ ನೂರಾರು ಮಂದಿ ಬಂದಿದ್ದರು.
ಮದುವೆ ಮನೆಗೆ ಬಂದಂತಿದ್ದ ಜನರು ಅಧಿಕಾರಿಗಳು, ಮಾವುತರು, ಕಾವಾಡಿಗಳ ವೇಷಭೂಷಣ ನೋಡಿದ ಇಲ್ಲಿನ ಆನೆ ಚೂರು ಹೆದರ್ಕಂಡಿಲ್ಲ. ಏಕೆಂದರೆ, ಅವು ಕೂಡ ಮೈತುಂಬಾ ಬಣ್ಣ ಬಿಡಿಸಿಕೊಂಡು ಸಿಂಗಾರಗೊಂಡಿದ್ದವಷ್ಟೆ ಅಲ್ಲದೆ ನಾನ್ ಚೆಂದಾ ಕಾಣ್ತಿನಾ ಅಂತಾ ಹಿನ್ನೀರಿನಲ್ಲಿ ಮುಖ ನೋಡಿಕೊಳ್ತಿದ್ದವು.ಇನ್ನೊಂದು ಕಡೆ ಮುದ್ದಾನೆ ಆನೆ ಮರಿಗಳನ್ನು ನೋಡುತ್ತಾ ಅಲ್ಲಿದ್ದವರು ಸಹ ಸೆಲ್ಫಿ ತೆಗೆದುಕೊಳ್ತಿದ್ದರು. ಮೇಲ್ನೋಟಕ್ಕೆ ಸಕ್ರೆಬೈಲ್ ಆನೆ ಬಿಡಾರದಲ್ಲಿ ಇವತ್ತು ಜೋರು ಗಜಿಬಿಜಿ, ಮಳೆಯ ಜೊತೆಗೆ ನೆಲವೆಲ್ಲಾ ಪಿಚಿಪಿಚಿ.
ಇನ್ನೂ ಸುದ್ದಿ ವಿಚಾರಕ್ಕೆ ಬರುವುದಾದರೆ, ಸಕ್ರೆಬೈಲು ಆನೆ ಶಿಬಿರದಲ್ಲಿ ‘ವಿಶ್ವ ಆನೆಗಳ ದಿನ’ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ವಿಶೇಷವಾದ ಈ ದಿನದಂದು ಶಿಬಿರದ ಎರಡು ಆನೆಮರಿಗಳಿಗೆ ‘ಚಾಮುಂಡಿ‘ ಮತ್ತು ‘ತುಂಗಾ’ ಎಂದು ನಾಮಕರಣ ಮಾಡಲಾಯಿತು. ನೇತ್ರಾವತಿ ಮತ್ತು ಭಾನುಮತಿ ಆನೆಗಳಿಗೆ ಜನಿಸಿದ ಮರಿಗಳಿಗೆ ಚಾಮುಂಡಿ ಹಾಗೂ ತುಂಗಾ ಎಂದು ಅರಣ್ಯ ಅಧಿಕಾರಿಗಳು ನಾಮಕರಣ ಮಾಡಿದರು. ಪುಟ್ಟ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡುವ ಹಾಗೆಯೇ, ಅಧಿಕಾರಿಗಳು ಮರಿಯಾನೆಗಳ ಕಿವಿಗಳಲ್ಲಿ ಅವುಗಳ ಹೆಸರನ್ನು ಕೂಗಿ ಹೇಳಿ ನಾಮಕರಣ ಮುಗಿಸಿದರು. ಅಲ್ಲದೆ ಅವುಗಳಿಷ್ಟದ ತಿಂಡಿಗಳನ್ನು ನೀಡಿ ಸಂಭ್ರಮಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಪ್ರಸ್ತುತ ಶಿಬಿರದಲ್ಲಿ ಒಟ್ಟು 25 ಆನೆಗಳಿದ್ದು, ಅವುಗಳಲ್ಲಿ 23 ಪಳಗಿದ ಆನೆಗಳಿವೆ. ದಸರಾ ಉತ್ಸವಗಳು ಸೇರಿದಂತೆ ವಿವಿಧ ಕಾರ್ಯಾಚರಣೆಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ ಎಂದರು.
elephant naming ceremony Sakrebailu Elephant Camp
World Elephant Day, Sakrebailu Elephant Camp,Karnataka Forest Department, Sakrebailu Shivamogga, Karnataka Forest Dept website, ವಿಶೇಷ ಅಂಚೆ ಲಕೋಟೆ, ಶಿವಮೊಗ್ಗ, #KarnatakaForest, #ChamundiTunga
