ED Raids Congress MLAs Properties ಶಿವಮೊಗ್ಗ, malenadu today news : August 24 2025 , ಪ್ರತಿದಿನ ಐನೂರು ಸಾವಿರ ರೂಪಾಯಿ ದುಡಿಮೆಯಾದರೆ ಸಾಕಪ್ಪ ಎಂದು ದುಡಿಯೋರೆ ಹೆಚ್ಚು. ಹಾಗಿದ್ರೂ ದಿನ ಕಳೆದು ಸಂಜೆಯಾಗುವ ಹೊತ್ತಿಗೆ ಅಂದುಕೊಂಡಷ್ಟು ದುಡಿಮೆಯಾಗದಿದ್ದರೇ, ಸಾವಿರ ಸಾವಿರ ಸಮಸ್ಯೆಗಳು ನೆನಪಾಗುತ್ತದೆ.
ಇನ್ನೂ ಒಂದಿಷ್ಟು ಸಾವಿರಕ್ಕೆ ತಿಂಗಳ ಪೂರ್ತಿ ದಿನಕ್ಕೆ 18 ಗಂಟೆಯ ಲೆಕ್ಕದಲ್ಲಿ ಕೆಲಸ ಮಾಡುವ ಅನಿವಾರ್ಯ ಬದುಕುಗಳ ಕಥೆಯಂತು ಬೇರೆಯದ್ದೆ ಆಗಿರುತ್ತದೆ. ಇಂತಹ ಮಿಡ್ಲ್ ಕ್ಲಾಸ್ ಜೀವನದ ಕಣ್ಣುಗಳಿಗೆ ಬೆಂಕಿ ಹೆಚ್ಚುವಷ್ಟು ದುಡ್ಡಿನ ರಾಶಿಯನ್ನು ಇಡಿ ತೋರಿಸಿದೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ನಿನ್ನೆಯಿಡಿ ಐನೂರು ರೂಪಾಯಿಯ ಕಂತೆಗಳನ್ನ ಟೇಬಲ್ ಮೇಲೆ ನೀಟಾಗಿ ಎಣಿಸಿ ಜೋಡಿಸಿದ್ದ ಫೋಟೋಗಳು ನಿಜಕ್ಕೂ ದುಡ್ಡು..ದುಡ್ಡು. ದುಡ್ಡು ಇಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳುವಂತಾಗಿತ್ತು. ಅಲ್ಲದೆ ಹೀಗೆಲ್ಲಾ ಹೇಗೆ ದುಡ್ಡು ಮಾಡುವುದು ಅನ್ನುವ ಚರ್ಚೆಗೆ ಕಾರಣವಾಗಿತ್ತು. ಅಂತಿಮವಾಗಿ ದುಡ್ಡಿನ ಮೂಲದ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು
ಅಂದಹಾಗೆ, ನೋಟಿನ ಕಂತೆಗಳ ಚಿತ್ರಣ ಸಿಕ್ಕಿದ್ದ ಕಾಂಗ್ರೆಸ್ ಶಾಸಕ ಕೆ ಸಿ.ವೀರೇಂದ್ರ ಅವರ ಮನೆಯಲ್ಲಿ. ಅಲ್ಲಿ ಸಿಕ್ಕಿದ್ದು 25 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಅಕ್ರಮವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರ ಮನೆ ಹಾಗೂ ಕ್ಯಾಸಿನೊಗಳ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಒಟ್ಟು 12 ಕೋಟಿ ರೂಪಾಯಿ ನಗದು ಸೇರಿದಂತೆ ಒಟ್ಟು 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಕಾಯಿದೆ (Prevention of Money Laundering Act – PMLA) ಅಡಿ ಇಡಿ ದಾಳಿ ನಡೆಸಿದೆ.
ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಗೋವಾ, ಮುಂಬೈ, ಜೋಧಪುರ, ಗ್ಯಾಂಗ್ಟಕ್ ಸೇರಿದಂತೆ ದೇಶದ 31 ಸ್ಥಳಗಳಲ್ಲಿ ಇಡಿ ರೇಡ್ ಮಾಡಿದ್ದು, ಈ ವೇಳೆ 17 ಬ್ಯಾಂಕ್ ಖಾತೆಗಳು ಮತ್ತು ನಾಲ್ಕು ಲಾಕರ್ ಪತ್ತೆಯಾಗಿದೆ.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿಸದ್ಯ ಪ್ರಕರಣ ಸಂಬಂಧ ವೀರೇಂದ್ರ ಅವರ ಸಹೋದರ ಕೆ.ಸಿ. ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್. ರಾಜ್ ಅವರನ್ನು ವಿಚಾರಣೆ ಒಳಪಡಿಸಿರುವ ಇಡಿ, ಕ್ಯಾಸಿನೊ ಉದ್ಯಮಿ ಮತ್ತು ಹವಾಲಾ ಆಪರೇಟರ್ ಸಮುದರ್ ಸಿಂಗ್ರನ್ನ ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದಿದೆ.
ಅಲ್ಲದೆ ವೀರೇಂದ್ರ ಮತ್ತು ಅವರ ಸಹಚರರನ್ನು ಗ್ಯಾಂಗ್ಟಕ್ ನಲ್ಲಿಯೇ ಅರೆಸ್ಟ್ ಮಾಡಲಾಗಿದೆ. ಅಲ್ಲಿನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಬೆಂಗಳೂರಿಗೆ ಕರೆತರಲು ಟ್ರಾನ್ಸಿಟ್ ರಿಮ್ಯಾಂಡ್ ಪಡೆಯಲಾಗಿದೆ.

ಭದ್ರಾವತಿ : ಗಂಡನ ಕೊಂದು ಭದ್ರಾ ನದಿಗೆ ಎಸೆದ ಕೇಸ್ : ಶಿಕ್ಷಕಿ & ಪ್ರಿಯಕರನಿಗೆ ಮರಣದಂಡನೆ! https://malenadutoday.com/bhadravathi-court-death-sentence-teacher/
illegal betting, money laundering, assets seized, casino raids, K.C. Veerendra ED raid news, ಇಡಿ ದಾಳಿ, ಕೆ.ಸಿ. ವೀರೇಂದ್ರ, ಕಾಂಗ್ರೆಸ್ ಶಾಸಕ, EDRaid, #KCVeerendra #CongressMLA ,#IllegalBetting