ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಅಪರೂಪ ಎಂಬಂತಹ ಪ್ರಕರಣವೊಂದರಲ್ಲಿ ಕೋರ್ಟ್ ಟೀನೇಜಿನ ಯುವಕನಿಗೆ ಡಿಜಿಟಲ್ ಬ್ಯಾನ್ ವಿಧಿಸಿದೆ. ಮಹಿಳೆಯೊಬ್ಬರ ಫೋಟೋಗಳನ್ನ ಅಶ್ಲೀಲವಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಸಿದ ಕಾರಣಕ್ಕೆ ಬಂಧಿತನಾಗಿದ್ದ ಯುವಕನಿಗೆ ಬೇಲ್ ನೀಡುವಾಗ ಕೋರ್ಟ್ ಈ ರೀತಿಯ ಷರತ್ತನ್ನು ವಿಧಿಸಿದೆ.
19 ವರ್ಷದ ಯುವಕನಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಆತನಿಗೆ 3 ವರ್ಷಗಳ ಕಾಲ ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ನಿಷೇಧ ಹೇರಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದರೆ ಜಾಮೀನು ರದ್ದುಗೊಳ್ಳಲಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ನಕಲಿ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಟಿನೇಜ್ ಯುವಕ ಸೊಶೀಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬಳ ಚಿತ್ರವನ್ನು ಮಾರ್ಪಿಂಗ್ ಮಾಡಿದ ಆರೋಪ ಎದುರಿಸಿದ್ದ. ಈ ಸಂಬಂಧ ಮೇ ತಿಂಗಳಿನಲ್ಲಿ ಬಂಧಿತನಾಗಿದ್ದ ಆತನಿಗೆ ಬೇಲ್ ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಅಶೋಕ್ ಕುಮಾರ್ ಜೈನ್, ಯುವಕನಿಗೆ ಜಾಮೀನು ನೀಡಿದರು. ‘
ಜೊತೆಯಲ್ಲಿಯೇ ಯುವಕ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ಅಥವಾ ಯಾವುದೇ ರೀತಿಯ ಮೆಸೇಜಿಂಗ್ ಮತ್ತು ವ್ಲಾಗಿಂಗ್ ವೇದಿಕೆಗಳನ್ನು ಬಳಸದಂತೆ ನಿರ್ಬಂಧ ಹೇರಿದ್ದಾರೆ. ಮೇಲಾಗಿ ಯಾವುದೇ ರೂಪದಲ್ಲಿ ಮಹಿಳೆ ಅಥವಾ ಆಕೆಯ ಕುಟುಂಬವನ್ನು ಸಂಪರ್ಕಿಸಬಾರದು ಅಥವಾ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಬಾರದು ಎಂದು ಸೂಚಿಸಿದ್ದಾರೆ. ಈ ಪೈಕಿ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ತಕ್ಷಣವೇ ರದ್ದುಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

digital Ban on Teenager for Cybercrime in court
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!