Deepavali Gift ಶಿವಮೊಗ್ಗ: ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ತಮ್ಮ ಕೆಲಸವನ್ನು ಮಾಡಲು ಬಿಡದೆ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಭವಿಷ್ಯವನ್ನು ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರು ಕರೆ ನೀಡಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಸದ್ಭಾವನಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ. ಶ್ರೀಕಾಂತ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗಾಗಿ ಸೀರೆ ವಿತರಣೆ ಹಾಗೂ ಮೃಷ್ಟಾನ್ನ ಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಮಕ್ಕಳು ತಮ್ಮದೇ ಕೆಲಸವನ್ನು ಮುಂದುವರಿಸದಂತೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬೇಕು ಎಂದು ಒತ್ತಿ ಹೇಳಿದರು.
ಹಿಂದಿನ ಬಾರಿ ದಸರಾ ಹಬ್ಬದ ಸಂದರ್ಭದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸಲಾಗಿತ್ತು. ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ನೀಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುವುದಾಗಿ ಅವರು ತಿಳಿಸಿದರು. “ನಾನು ಕೇವಲ ಚುನಾವಣೆಗೋಸ್ಕರ ಈ ಕೆಲಸ ಮಾಡುತ್ತಿಲ್ಲ. ನಿಮ್ಮೆಲ್ಲರ ಕಷ್ಟದ ಜೀವನವನ್ನು ನಾನು ಹತ್ತಿರದಿಂದ ಅರಿತಿದ್ದೇನೆ. ನಿಮ್ಮೊಂದಿಗೆ ಸದಾ ಇರುತ್ತೇನೆ. ಮುಂದಿನ ಬಾರಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪುರುಷ ಪೌರ ಕಾರ್ಮಿಕರಿಗೂ ಇದೇ ರೀತಿ ಕಾರ್ಯಕ್ರಮ ಆಯೋಜಿಸಲಾಗುವುದು,” ಎಂದು ಅವರು ಭರವಸೆ ನೀಡಿದರು.
ಸರ್ಕಾರವು ಮಹಿಳಕೆಯರಿಗೆ ಒಂದು ವರ್ಷದಲ್ಲಿ 12 ದಿನಗಳ ಋತುಚಕ್ರದ ರಜೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಮುಖ್ಯಮಂತ್ರಿ (CM) ಹಾಗೂ ಉಪಮುಖ್ಯಮಂತ್ರಿ (DCM) ಅವರು ಬಡವರ ಕಷ್ಟವನ್ನು ಸರಿಯಾಗಿ ಅರಿತಿದ್ದಾರೆ. ಸರ್ಕಾರ ಸದಾ ನಿಮ್ಮ ಪಾಲಿಗೆ ಇರುತ್ತದೆ. ಪೌರಕಾರ್ಮಿಕ ಸಮುದಾಯದಲ್ಲಿರುವವರನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಕೆಲಸವನ್ನು ನೀವೆಲ್ಲ ಮಾಡಬೇಕು. ನೀವು ಸಮಾಜದಲ್ಲಿ ಬೆಳೆಯಬೇಕು ಎಂದು ಎಂ. ಶ್ರೀಕಾಂತ್ ಹೇಳಿದರು.

Deepavali Gift ಭಾವನಾತ್ಮಕ ಬಂಧದ ಕಾರ್ಯಕ್ರಮ: ಗೋವಿಂದಪ್ಪ
ಮಹಾನಗರ ಪಾಲಿಕೆಯ ಅಧ್ಯಕ್ಷ ಗೋವಿಂದಪ್ಪ ಅವರು ಮಾತನಾಡಿ, ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದು ಕೇವಲ ಸಾಂಕೇತಿಕ ಕಾರ್ಯಕ್ರಮವಾಗಿರದೆ, ತಾಯ್ತನದಲ್ಲಿರುವ ಭಾವನಾತ್ಮಕ ಬಂಧದ ಕಾರ್ಯಕ್ರಮವಾಗಿದೆ. ಪ್ರೀತಿಯಿಂದ ತಂದೆ, ಅಣ್ಣ, ತಾಯಿ ಬಾಗಿನ ಕೊಡಲು ಬರುತ್ತಾರೆ ಎಂದು ಮಹಿಳೆಯರು ಕಾತರದಿಂದ ಕಾಯುತ್ತಿರುತ್ತಾರೆ. ಅದು ಸಾಧ್ಯವಾಗದೇ ಇದ್ದಾಗ ಅವರಿಗೆ ಬೇಸರವಾಗುತ್ತದೆ. ಇದನ್ನು ಅರಿತ ಶ್ರೀಕಾಂತ್ ಅಣ್ಣ ಎಲ್ಲರ ತಂದೆ-ಅಣ್ಣನ ಸ್ಥಾನದಲ್ಲಿ ನಿಂತು, ಚುನಾವಣೆ ಇಲ್ಲದ ಸಂದರ್ಭದಲ್ಲಿಯೂ ಸಮಾನತೆಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ದೇವರನ್ನು ಎಲ್ಲೆಲ್ಲೂ ಹುಡುಕುವ ಬದಲು, ಕಾರ್ಮಿಕರಿಗೆ ಬಾಗಿನ ಕೊಡುವುದರ ಮೂಲಕ ಕಾರ್ಮಿಕರಲ್ಲಿ ದೇವರನ್ನು ಶ್ರೀಕಾಂತ್ ಅಣ್ಣ ಅವರು ಕಾಣುತ್ತಿದ್ದಾರೆ. ಅವರು ಅಧಿಕಾರಸ್ಥ ರಾಜಕಾರಣಿಯಾಗಿ ಬೆಳೆಯಬೇಕು, ಎಂದು ಹಾರೈಸಿದರು.
Deepavali Gift ಕಷ್ಟದಲ್ಲಿರುವವರಿಗೆ ನೆರವಾಗುವ ಜೀವ ಶ್ರೀಕಾಂತ್: ಕೆ.ಪಿ. ಶ್ರೀಪಾಲ್
ಕೆ.ಪಿ. ಶ್ರೀಪಾಲ್ ಅವರು ಮಾತನಾಡಿ, “ಇಡೀ ದೇಶದಲ್ಲಿ ದೇವರಾಜ ಅರಸು ಅವರ ನಂತರ ಕರ್ನಾಟಕ ಕಂಡ ಉತ್ತಮ ನಾಯಕ ಎಂದರೆ ಅದು ಸಿದ್ದರಾಮಯ್ಯ. ಅದೇ ರೀತಿ ಶಿವಮೊಗ್ಗದಲ್ಲಿ ಕಷ್ಟದಲ್ಲಿರುವವರಿಗೆ ಶ್ರಮಿಸುವ ಜೀವ ಎಂದರೆ ಅದು ಶ್ರೀಕಾಂತ್. ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಇವರನ್ನು ವಿಧಾನಸೌಧಕ್ಕೆ ಕಳುಹಿಸುವ ಕೆಲಸವನ್ನು ನೀವೆಲ್ಲ ಮಾಡಬೇಕು, ಎಂದರು. ಸ್ಮಾರ್ಟ್ ಸಿಟಿಗಾಗಿ 2,000 ಕೋಟಿ ರೂಪಾಯಿ ವೆಚ್ಚ ಮಾಡಿದ್ದರೂ ರಸ್ತೆಗಳು ಸರಿಯಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಆ ಹಣದಲ್ಲಿ ಪೌರ ಕಾರ್ಮಿಕರಿಗೆ 20 ಲಕ್ಷ ರೂಪಾಯಿ ವೆಚ್ಚದ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದರೆ ಉತ್ತಮ ಕೆಲಸವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಶ್ರೀಕಾಂತ್ ಅವರು ಬೇರೆಯವರಿಗೆ ಅವಕಾಶ ಕೊಟ್ಟು ಬೆಳೆಸಿದ್ದಾರೆ, ಯಾವುದೇ ಆಸ್ತಿಯನ್ನು ಮಾಡಿಕೊಳ್ಳದೆ ಸರಳವಾಗಿ ಬದುಕಿ ತೋರಿಸುತ್ತಿದ್ದಾರೆ ಎಂದರು.
ಪೌರ ಕಾರ್ಮಿಕರ ಸೇವೆ ಶ್ಲಾಘನೀಯ: ರೇಖಾ ರಂಗನಾಥ್
ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಅವರು, “ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಸ್ಥಾನ ಮತ್ತು ಛಾಪನ್ನು ಮೂಡಿಸುತ್ತಿದ್ದಾರೆ. ಪೌರ ಕಾರ್ಮಿಕ ಮಹಿಳೆಯರು ಮನೆಯ ನಿರ್ವಹಣೆಯ ಜೊತೆಗೆ, ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿಯೂ ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಹಕರಿಸಿದ ಅವರ ಸೇವೆ ಶ್ಲಾಘನೀಯ. ಇಂತಹ ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ ವಿತರಿಸುವ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷ ತಂದಿದೆ. ಶ್ರೀಕಾಂತ್ ಅವರು ಎಂದಿಗೂ ಅಧಿಕಾರದ ಆಸೆಯನ್ನು ಪಡದೆ, ಅಣ್ಣನ ಸ್ಥಾನದಲ್ಲಿ ನಿಂತುಕೊಂಡು ಈ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Deepavali Gift ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಮಹಿಳೆಯರಿಗೆ ಸುಮಾರು 2,000 ಮೌಲ್ಯದ ಸೀರೆಯನ್ನು ವಿತರಿಸಲಾಯಿತು ಮತ್ತು 30ಕ್ಕೂ ಹೆಚ್ಚು ಬಗೆಯ ಖಾದ್ಯಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು.