Dam Water Level today : ಶಿವಮೊಗ್ಗ ಜಿಲ್ಲೆಯಾಧ್ಯಂತ ಉತ್ತಮ ಮಳೆಯಾಗುತ್ತಿದ್ದು, ಭದ್ರಾ, ಲಿಂಗನಮಕ್ಕಿ ಮತ್ತು ತುಂಗಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜಲಾಶಯಗಳ ಒಳಹರಿವು ಮತ್ತು ಹೊರಹರಿವಿನ ಕುರಿತು ಇತ್ತೀಚಿನ ಮಾಹಿತಿ ಇಲ್ಲಿದೆ.
ಶಿವಮೊಗ್ಗ : ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಭದ್ರಾ, ಲಿಂಗನಮಕ್ಕಿ ಮತ್ತು ತುಂಗಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮ ಸ್ಥಿತಿಯಲ್ಲಿದೆ. ಇಂದು (ಜುಲೈ 29, 2025) ಜಲಾಶಯಗಳ ಒಳಹರಿವು ಮತ್ತು ಹೊರಹರಿವಿನ ಕುರಿತಾದ ಇತ್ತೀಚಿನ ಮಾಹಿತಿ ಇಲ್ಲಿದೆ.
Dam Water Level today : ಭದ್ರಾ ಜಲಾಶಯದ ಸ್ಥಿತಿಗತಿ
ಭದ್ರಾ ಜಲಾಶಯಕ್ಕೆ 18,546 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದ್ದು, ಜಲಾಶಯದಿಂದ ಒಟ್ಟು 22,007 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ (MSL 2158.00 ಅಡಿ) ಇದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದೆ. ಪ್ರಸ್ತುತ ಜಲಾಶಯದ ಮಟ್ಟ 180 ಅಡಿ 3 ಇಂಚು (MSL 2152.25 ಅಡಿ) ತಲುಪಿದ್ದು, 64.478 ಟಿಎಂಸಿ ನೀರು ಸಂಗ್ರಹವಾಗಿದೆ.



ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯಕ್ಕೆ 21,928 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಒಟ್ಟು 8,967 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819.00 ಅಡಿ. ಇಂದಿನ (ಜುಲೈ 29, 2025) ಮಾಹಿತಿಯ ಪ್ರಕಾರ, ಜಲಾಶಯದ ಪ್ರಸ್ತುತ ಮಟ್ಟ 1810.85 ಅಡಿ ತಲುಪಿದೆ, ಇದು ಹಿಂದಿನ ದಿನಕ್ಕಿಂತ 0.35 ಅಡಿ ಏರಿಕೆಯನ್ನು ಸೂಚಿಸುತ್ತದೆ.

Dam Water Level today : ತುಂಗಾ ಜಲಾಶಯ
ತುಂಗಾ ಜಲಾಶಯಕ್ಕೆ ಒಟ್ಟು 38,443 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, ನದಿಗೆ 30,443 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಒಟ್ಟು ಸಾಮರ್ಥ್ಯ 3.24 ಟಿಎಂಸಿ ಮತ್ತು ಲೈವ್ ಸಾಮರ್ಥ್ಯ 2.411 ಟಿಎಂಸಿ ಇದೆ. ಇಂದು (ಜುಲೈ 29, 2025) ಜಲಾಶಯದ ಮಟ್ಟ 588.05 ಮೀಟರ್ ತಲುಪಿದ್ದು, ಒಟ್ಟು 3.128 ಟಿಎಂಸಿ ನೀರು ಸಂಗ್ರಹವಾಗಿದೆ.