SHIVAMOGGA | MALENADUTODAY NEWS | Aug 27, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮತ್ತು ಮೀನ .
ಇಂದಿನ ರಾಶಿ ಭವಿಷ್ಯ:
Aug 27, 2024 ದಿನಾಂಕದ ಜಾತಕ ಫಲ
ಮೇಷ – ಹಣ ಬರುತ್ತದೆ ಹೆಚ್ಚಾಗುತ್ತದೆ. ಪ್ರೀತಿ ಇರುತ್ತದೆ ಮನೆಯಲ್ಲಿ. ಒಳ್ಳೆಯ ಸಮಯ. ದಿನವೂ ಉತ್ತಮವಾಗಿರುತ್ತದೆ.
ವೃಷಭ ರಾಶಿ -ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ಮತ್ತು ವ್ಯಾಪಾರ ಚೆನ್ನಾಗಿರಲಿದೆ. ಯೋಚನೆಗಳು ದೂರವಾಗಲಿದೆ ನಿಮ್ಮ ಆತ್ಮವಿಶ್ವಾಸವು ಉತ್ತಮವಾಗಿರುತ್ತದೆ ಮತ್ತು ಕಷ್ಟಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ಮಿಥುನ – ಆರೋಗ್ಯದ ಕಡೆ ಗಮನ ಕೊಡಿ. ಉದ್ಯೋಗಾಕಾಂಕ್ಷಿಗಳು ಹೊಸ ಅವಕಾಶಗಳನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳು ಫಲಿತಾಂಶಗಳು ಅಥವಾ ಪ್ರವೇಶದ ಬಗ್ಗೆ ಒಳ್ಳೆಯ ಸುದ್ದಿ ಕೇಳಲು ನಿರೀಕ್ಷಿಸಬಹುದು.
ಕರ್ಕ ರಾಶಿ – ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಹೂಡಿಕೆ ಮಾಡಲು ಉಳಿತಾಯವನ್ನು ಬಳಸುತ್ತೀರಿ. ನಿಮ್ಮ ಸುತ್ತಲಿರುವ ಜನರಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ
ಸಿಂಹ – ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ಸ್ಥಾನಮಾನ ಮತ್ತು ಗೌರವವನ್ನು ಹೆಚ್ಚಾಗುತ್ತದೆ. ಇವತ್ತಿನ ನಿರ್ಧಾರ ಮುಂದೆ ಬದುಕಿಗೆ ಅನುಕೂಲವಾಗುತ್ತದೆ. ಒಳ್ಳೆಯ ಸುದ್ದಿಯನ್ನು ಕೇಳಬಹುದು.
ಕನ್ಯಾ ರಾಶಿ – ದಿನದಲ್ಲಿ ಬೇಸರವನ್ನು ಅನುಭವಿಸುತ್ತೀರಿ . ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೀರಿ, ಮನಸ್ಥಿತಿ ಬದಲಾವಣೆಗಳನ್ನು ಎದುರಿಸುತ್ತೀರಿ. ಕೆಲವರು ನಿಮಗೆ ದ್ರೋಹ ಮಾಡಬಹುದು ವ್ಯವಹಾರಕ್ಕಾಗಿ ನೀವು ಯಾವುದೇ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳದಿರುವುದು ಉತ್ತಮ
ತುಲಾ – ಲಾಭಕ್ಕಾಗಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತೀರಿ. ನಷ್ಟವು ಸಹ ಲಾಭವಾಗಿ ಬದಲಾಗುತ್ತದೆ. ನಿಮ್ಮ ಹೂಡಿಕೆಯು ಮುಂದಿನ ದಿನಗಳಲ್ಲಿ ಲಾಭವನ್ನು ನೀಡುತ್ತದೆ. ಆರ್ಥಿಕ ಸ್ಥಿತಿಯು ಸಹ ಸುಧಾರಿಸಲಿದೆ.
ವೃಶ್ಚಿಕ ರಾಶಿ – ಮಾನಸಿಕ ಶಾಂತಿ ಮತ್ತು ಸಂತೋಷ ಪಡೆಯುತ್ತೀರಿ. ವ್ಯಾಪಾರದ ವಿಷಯದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯಬಹುದು, ಹೊಸ ಜವಾಬ್ದಾರಿಗಳನ್ನು ನಿರೀಕ್ಷಿಸಬಹುದು. ಉದ್ಯೋಗಾಕಾಂಕ್ಷಿಗಳಿಗೆ ಸರಿಯಾದ ಕೆಲಸ ಸಿಗಬಹುದು.
ಧನು ರಾಶಿ – ನೀವು ಸಂತೋಷದಿಂದ ಇರುತ್ತೀರಿ. ಜೀವನದಲ್ಲಿ ಸ್ವಲ್ಪ ಪ್ರಗತಿ ಕಾಣುತ್ತದೆ. ಸ್ಥಗಿತಗೊಂಡ ಯೋಜನೆಗಳು ಸ್ವಯಂಚಾಲಿತವಾಗಿ ಆರಂಭವಾಗಲಿದೆ. ಹೊಸ ಅವಕಾಶಗಳನ್ನು ಸಿಗಬಹುದು
ಮಕರ – ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು. ಕಟುವಾದ ಮಾತುಗಳು ನಿಮ್ಮವರಿಗೆ ಬೇಸರ ಮೂಡಿಸಬಹುದು. ಅನಿವಾರ್ಯವಾಗಿ ಕೆಲವು ವಿಚಾರಗಳು ಕಾನೂನು ಕಟ್ಲೆ ಎದುರಿಸಬಹುದು. ಮೌನವೇ ಬಂಗಾರ ಎಂದು ನಿಮಗೆ ಅನಿಸಲಿದೆ.
ಕುಂಭ – ವ್ಯವಹಾರದಲ್ಲಿ ಹೊಸತನ ಇರಲಿದೆ . ಗುಪ್ತ ಶತ್ರುಗಳ ಪ್ರಭಾವ ಕಡಿಮೆ ಇರುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಈಗ ಬಗೆಹರಿಯಲಿವೆ. ದಿನ ಸಮತೋಲನವಾಗಿರುತ್ತದೆ
ಮೀನ – ಶತ್ರುಗಳನ್ನು ನಿಯಂತ್ರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ತಪ್ಪುಗಳ ಮೇಲೆ ನಿಯಂತ್ರಣ ಇರಲಿ ನಕಾರಾತ್ಮಕ ವಾತಾವರಣ ನಿವಾರಣೆಯಾಗುತ್ತದೆ. ನಿಮ್ಮ ವಿಶ್ವಾಸ ಎಲ್ಲದಕ್ಕೂ ಕಾರಣವಾಗುತ್ತದೆ.