ಕ್ರಿಪ್ಟೋ ಟ್ರೇಡಿಂಗ್ ನೆಪದಲ್ಲಿ  ಶಿವಮೊಗ್ಗ ವ್ಯಕ್ತಿಗೆ 2.66 ಲಕ್ಷ ವಂಚನೆ

prathapa thirthahalli
Prathapa thirthahalli - content producer

ಶಿವಮೊಗ್ಗ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶದ ಆಮಿಷವೊಡ್ಡಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 2,66,069 ಹಣವನ್ನು ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ  ವ್ಯಕ್ತಿ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರ  ಮೊಬೈಲ್​ಗೆ  ಅಕ್ಟೋಬರ್ 02, ರಂದು ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿದೆ. ಈ ಸಂದೇಶದಲ್ಲಿ, ತಮ್ಮನ್ನು Live Trading ಕಂಪನಿಯವರು ಎಂದು ಪರಿಚಯಿಸಿಕೊಂಡ ವಂಚಕರು, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶ ನೀಡುವುದಾಗಿ ನಂಬಿಸಿದ್ದಾರೆ.

- Advertisement -

ಈ ಆಮಿಷಕ್ಕೆ ಒಳಗಾದ ದೂರುದಾರರು  ಹಂತ ಹಂತವಾಗಿ ಒಟ್ಟು 2,66,069 ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ವಂಚಕರು ಹಣವನ್ನು  ನೀಡದೆ ಲಾಭಾಂಶವನ್ನು ನೀಡದೆ ಮೋಸಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.  

Crypto Trading Fraud 

Share This Article
Leave a Comment

Leave a Reply

Your email address will not be published. Required fields are marked *