Cobra in sofa ಮನೆಯ ಸೋಫಾದೊಳಗೆ ಅಡಗಿ ಕುಳಿತಿತ್ತು ವಿಷಕಾರಿ ಹಾವು
ಶಿವಮೊಗ್ಗ : ಶಿವಮೊಗ್ಗ ನಗರದ ಸಿದ್ದೇಶ್ವರ ಸರ್ಕಲ್‌ನಲ್ಲಿರುವ ಒಂದು ಮನೆಯಲ್ಲಿ ಸೋಫಾ ಒಳಗೆ ಅಡಗಿದ್ದ ಸಣ್ಣ ನಾಗರ ಹಾವಿನ ಮರಿಯನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಮನೆಯವರು ತಮ್ಮ ಸೋಫಾದೊಳಗೆ ಹಾವಿನ ಮರಿಯನ್ನು ನೋಡಿ ಆತಂಕಗೊಂಡ ಕೂಡಲೇ, ತಕ್ಷಣವೇ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕಾಗಮಿಸಿದ ಸ್ನೇಕ್ ಕಿರಣ್, ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಯಾವುದೇ ಹಾನಿಯಾಗದಂತೆ ನಾಗರ ಹಾವಿನ ಮರಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ.
