Chatpat news : ಎಳನೀರು ಕಳ್ಳತನ ಶಂಕೆ: ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು
Chatpat newsಕಡೂರು: ತೆಂಗಿನ ತೋಟದಲ್ಲಿ ಎಳನೀರು ಕದ್ದಿದ್ದಾನೆಂದು ಆರೋಪಿಸಿ ಮಾಲೀಕ ಮತ್ತು ಆತನ ಅಳಿಯನಿಂದ ಹಲ್ಲೆಗೊಳಗಾಗಿದ್ದ ಗೊಲ್ಲರಹಟ್ಟಿ ನಿವಾಸಿ ಕುಮಾರ್ (37) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ. ಹಲ್ಲೆ ನಡೆಸಿದ ಮಧು ಮತ್ತು ಚಂದ್ರಪ್ಪ ಅವರನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.
Chatpat news ಅಪಘಾತದಲ್ಲಿ ಮೃತಪಟ್ಟ ಯುವಕನಿಂದ ನೇತ್ರದಾನ
ಹೊಳೆಹೊನ್ನೂರು: ವಾಹನ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಯಡೇಹಳ್ಳಿ ಗ್ರಾಮದ ಪುನೀತ್ ರಾಜ್ (19) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಗನ ಸಾವಿನಲ್ಲೂ ಮಾನವೀಯತೆ ಮೆರೆದ ಪೋಷಕರು, ವೈದ್ಯರ ಸಲಹೆಯಂತೆ ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಆದರೆ ಸಕಾಲದಲ್ಲಿ ಸ್ಪಂದನೆ ಸಿಗದ ಕಾರಣ ನೇತ್ರದಾನ ಮಾತ್ರ ಮಾಡಲು ಸಾಧ್ಯವಾಗಿದೆ.
ಬೈಕ್ ಅಪಘಾತ: ಗಾಯಾಳಿಗೆ ನೆರವಾದ ಶಾಸಕರ ಆಪ್ತ ಸಹಾಯಕ
ಆನಂದಪುರಂ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಬಸ್ ಡಿಕ್ಕಿಯಾಗಿ ಬೈಕ್ ಸವಾರ ಬಂಗಾರಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಸಹಾಯಕ ಪೃಥ್ವಿರಾಜ್ ಅವರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.