Chatpat News :ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ತೀರ್ಥಹಳ್ಳಿ, ಜುಲೈ 8, 2025: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಕೌರಿ ಹಕ್ಲು ಗ್ರಾಮದ ಹುಲ್ಕೋಡು ನಿವಾಸಿ ಕರುಣಾಕರ್ ಭಟ್ (63) ಎಂಬುವರು ಮಂಗಳವಾರ ಸಂಜೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನನೊಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Chatpat News : ಹೃದಯಾಘಾತ ಹೆಚ್ಚಳ ಜಯದೇವ ಆಸ್ಪತ್ರೆಗೆ ಭಾರಿ ಜನದಟ್ಟಣೆ
ಬೆಂಗಳೂರು, ಜುಲೈ 8, 2025: ರಾಜ್ಯಾದ್ಯಂತ ಹೃದಯಾಘಾತ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಹೃದಯ ತಪಾಸಣೆಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಹಿಂದೆ ಪ್ರತಿದಿನ 700-800 ಮಂದಿ ಬರುತ್ತಿದ್ದ ಆಸ್ಪತ್ರೆಗೆ ಈಗ 2,000-3,000 ಮಂದಿ ಬರುತ್ತಿದ್ದು, ವಿಪರೀತ ನೂಕುನುಗ್ಗಲು ಉಂಟಾಗಿದೆ. ಜನದಟ್ಟಣೆಯನ್ನು ನಿಭಾಯಿಸಲು ಆಸ್ಪತ್ರೆ ಆಡಳಿತ 4 ಹೆಚ್ಚುವರಿ ಕೌಂಟರ್‌ಗಳನ್ನು ತೆರೆದಿದೆ.

ಹೃದಯ ತಪಾಸಣೆಗೆ ಮುಗಿಬಿದ್ದ ಜನರು.
ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಘಟನೆ.
ಆತಂಕ ಬೇಡ ಎಂದು ವೈದ್ಯರು ಹೇಳಿದರು ಕೇಳದ ಜನರು. ಸಾಲುಗಟ್ಟಿ ನಿಂತ ಸಾವಿರಾರು ಜನರು pic.twitter.com/fZSVdgdSCr— ರವಿ ಕೀರ್ತಿ ಗೌಡ (@ravikeerthi22) July 8, 2025
ಶಿವಮೊಗ್ಗದ ಟೆಕ್ಕಿ ಬೆಂಗಳೂರಿನಲ್ಲಿ ಅರೆಸ್ಟ್
ಬೆಂಗಳೂರು, ಜುಲೈ 8, 2025: ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಶಿವಮೊಗ್ಗ ಮೂಲದ ಟೆಕ್ಕಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೆ.ಎ. ಮೂರ್ತಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದರೂ, ವಿಪರೀತ ಸಾಲ ಮಾಡಿಕೊಂಡಿದ್ದನು. ತಂದೆ ಆಸ್ತಿ ಮಾರಿ ಸಾಲ ತೀರಿಸಿದರೂ, ಹೆಚ್ಚು ಹಣ ಗಳಿಸುವ ದುರಾಸೆಯಿಂದ ಕಳ್ಳತನಕ್ಕಿಳಿದಿದ್ದ. ಈ ಹಿಂದೆ ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ ಮೂರ್ತಿಯನ್ನು ಬೆನ್ನತ್ತಿದ ಪೊಲೀಸರು, ಆತನಿಂದ 16.75 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.