ಸೆಕ್ಸಸ್​​ಗೆ ದಾರಿ​ ಬ್ರಾಹ್ಮಿ ಮುಹೂರ್ತ! CEO ಕೊಟ್ಟರು ಟಿಪ್ಸ್​! ಅಮೆರಿಕಾದ ಯಶಸ್ಸಿಗೂ ಇದೆ ಕಾರಣ!

prathapa thirthahalli
Prathapa thirthahalli - content producer

Brahmi Muhurta : ವಿದ್ಯಾರ್ಥಿಗಳು ಓದಿನಲ್ಲಿ ಯಶಸ್ಸುಗಳಿಸಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಕುಮಾರ್ ಉತ್ತಮ ಟಿಪ್ಸ್ ​ಒಂದನ್ನು ಕೊಟ್ಟಿದ್ದಾರೆ.ಅಷ್ಟೇ ಅಲ್ಲದೆ ತಮ್ಮ ಸಾಧನೆಗೆ ಕಾರಣವೇನು ಎಂಬ ಸೀಕ್ರೆಟ್​ನ್ನು ಇಂದು ರಿವೀಲ್​ ಮಾಡಿದ್ದಾರೆ.

ಹೌದು ಇಂದು  ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ದಸರಾ-2025ರ ಅಂಗವಾಗಿ ಪಾಲಿಕೆವತಿಯಿಂದ ಸಮನ್ವಯ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜ್ಞಾನದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇ ವೇಳೆ ಮಾತನಾಡುತ್ತಾ ಬೆಳಿಗ್ಗೆ 4 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಅದಕ್ಕೆ ನಾನೇ ಉದಾಹಾರಣೆ ಎಂದರು. 

- Advertisement -

Brahmi Muhurta ಅಮೆರಿಕಾದ ಯಶಸ್ಸಿಗೂ ಇದೆ ಕಾರಣ

ಅಮೇರಿಕಾದ ನಾಸಾದ ವಿಜ್ಞಾನಿಗಳು ರಾಕೇಟ್ ಉಡಾವಣೆಯ ಪ್ರಯೋಗದಲ್ಲಿ 2 ವರ್ಷಗಳಿಂದ ಹಿನ್ನಡೆ ಅನುಭವಿ ಸುತ್ತಿದ್ದರು. ಬಳಿಕ ಅವರು ಜರ್ಮನಿ ವಿಜ್ಞಾನಿಗಳ ನೆರವು ಪಡೆದಾಗ ಆರು ತಿಂಗಳಲ್ಲೇ ಪ್ರಯೋಗ ಯಶಸ್ವಿಯಾಯಿತು. ಈ ಬಗ್ಗೆ ಪತ್ರಕರ್ತರು ಜರ್ಮನಿ ವಿಜ್ಞಾನಿಗಳಿಗೆ ಯಶಸ್ಸಿನ ಕಾರಣವೇನು ಅಮೇರಿಕಾದ ವಿಜ್ಞಾನಿಗಳು ವೈಫಲ್ಯತೆ ಏನು ಎಂದಾಗ, ಜರ್ಮನಿ ವಿಜ್ಞಾನಿಗಳು ನಾವು ಬೆಳಿಗ್ಗೆ ಬ್ರಾಹೀಮುಹೂರ್ತದಲ್ಲಿ ಎದ್ದು ಕೆಲಸ ಮಾಡುತ್ತೇವೆ. ಅಮೇರಿಕಾದ ವಿಜ್ಞಾನಿಗಳು ರಾತ್ರಿ ಕೆಲಸ ಮಾಡುತ್ತಾರೆ ಇದೇ ವ್ಯತ್ಯಾಸ ಎಂದು ಉದಾಹಾರಣೆಯನ್ನು ಸಹ ನೀಡಿದರು. 

ನಾಗರೀಕ ಸಮಾಜದಲ್ಲಿ ಸಿವಿಲ್ ಸೆನ್ಸ್‌ನ್ನು ಬೆಳೆಸಿಕೊಳ್ಳಬೇಕು :  ಮಿಥುನ್‌ಕುಮಾರ್ ಜಿ.ಕೆ 

ಈ ಸಂದರ್ಭದಲ್ಲಿ  ಜಿಲ್ಲಾ ರಕ್ಷಣಾಧಿಕಾರಿ ಮಿಥುನ್​ಕುಮಾರ್​ ಜಿ.ಕೆ ಮಾತನಾಡಿ  ವಿದ್ಯಾರ್ಥಿಗಳು  ಯಾವರೀತಿ ಓದಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಇಂದಿನ ದಿನಗಳಲ್ಲಿ ಸಿಗುವ ಮಾಹಿತಿ ಓವರ್‌ಲೋಡ್ ಆಗಿದೆ. ಆದರೆ ಅನೇಕರು ಅದರಿಂದ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲಿಲ್ಲ ಬದಲಾಗಿ ಆತುರದ ಗುಣಗಳಿಂದ ಅನೇಕ ಬಾರಿ ಎಡವಟ್ಟು ಮಾಡುತ್ತಾರೆ. ಪ್ರತ್ಯಕ್ಷೆ ಕಂಡರೂ ಪ್ರಾಮಾಣಿಸಿ ನೋಡು ಎನ್ನುವ ಗಾದೆ ಇದೆ. ಮೊಬೈಲ್‌ನಲ್ಲಿ ಕೇಳಿದ್ದು-ನೋಡಿದ್ದು ಎಲ್ಲವೂ ಸತ್ಯ ಅಲ್ಲ, ಸಿವಿಲೇಜೆಷನ್ ಎತ್ತರಕ್ಕೆ ಬೆಳೆದ ದೇಶಗಳನ್ನು ನೋಡಿದಾಗ ಅವರೆಲ್ಲರೂ ಜ್ಞಾನಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಹಾಗಾಗಿ ಆ ದೇಶಗಳಲ್ಲಿ ಬೆಳವಣಿಗೆ ಸಾಧ್ಯವಾಗಿದೆ. ಜ್ಞಾನ ಎಂದರೆ ಅಕಾಡೆಮಿಕ್ ಪಠ್ಯಗಳು ಮಾತ್ರ ಅಲ್ಲ, ಪರಿಣಿತಿ ಹೊಂದುವುದರ ಜೊತೆಗೆ ಛಲವನ್ನು ಬೆಳೆಸಿಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯಬೇಕು. ಮಾನವೀಯ ಮೌಲ್ಯಗಳನ್ನು ಪಾಲನೆ ಮಾಡಬೇಕು. ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಸಾಮರ್ಥ್ಯ ಇದ್ದೇ ಇರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ ಒಂದು ವರ್ಷವಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪ್ರಮುಖವಾಗಿ ನಾಗರೀಕ ಸಮಾಜದಲ್ಲಿ ಸಿವಿಲ್ ಸೆನ್ಸ್‌ನ್ನು ಬೆಳೆಸಿಕೊಳ್ಳಬೇಕು ಎಂದರು.

Brahmi Muhurta
Brahmi Muhurta ಜ್ಞಾನದಸರಾ ಕಾರ್ಯಕ್ರಮ
Share This Article
Leave a Comment

Leave a Reply

Your email address will not be published. Required fields are marked *