ಶಿವಮೊಗ್ಗ: ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ವ್ಯಕ್ತಿಯೊಬ್ಬರು ಶಿವಮೊಗ್ಗದ ಜೋಯಿಸ್ ಕಾಂಪೌಂಡ್‌ನ ಬಿ.ಬಿ. ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ.
ಬೈಕ್ ಮಾಲೀಕರು ಎಂದಿನಂತೆ ತಮ್ಮ ಪಲ್ಸರ್ 200 NS ಬೈಕನ್ನು ಮಧ್ಯಾಹ್ನ ಮನೆ ಮುಂದೆ ನಿಲ್ಲಿಸಿದ್ದರು. ಆದರೆ, ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಬೈಕ್ ಸ್ಥಳದಲ್ಲಿ ಇರಲಿಲ್ಲ. ಎಷ್ಟೇ ಹುಡುಕಿದರೂ ಬೈಕ್ ಪತ್ತೆಯಾಗಲಿಲ್ಲ. ಈ ಘಟನೆಯಿಂದ ಆಘಾತಗೊಂಡ ಬೈಕ್ ಮಾಲೀಕರು ಕೂಡಲೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.