bike owner jailed / ಅಪ್ರಾಪ್ತನಿಗೆ ಬೈಕ್ ನೀಡಿದಾತನಿಗೆ ದಂಡದ ಜೊತೆ 1ದಿನ ಜೈಲು
State news today / ಬೆಂಗಳೂರು: ಅಪ್ರಾಪ್ತ ವಯಸ್ಸಿನ ಯುವಕನೊಬ್ಬ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಕರಣದಲ್ಲಿ, ಆತನಿಗೆ ಬೈಕ್ ನೀಡಿದ, ಮಾಲೀಕನಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಿ. ತುಮಕೂರು ಜಿಲ್ಲೆಯ ತಾಲ್ಲೂಕು ಒಂದರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಬೈಕಿನ ಮಾಲೀಕರಿಗೆ ಒಂದು ದಿನದ ಜೈಲು ಶಿಕ್ಷೆ ಮತ್ತು ₹30,000 ದಂಡ ವಿಧಿಸಲಾಗಿದ್ದು. ಇಂತಹ ಪ್ರಕರಣದಲ್ಲಿ ಇದು ಮೊದಲ ತೀರ್ಪು ಎನ್ನಲಾಗಿದೆ. ಬೈಕಿನ ಮಾಲೀಕರು ಜೂನ್ 30 ರಂದು ನ್ಯಾಯಾಲಯದ ಆವರಣದಲ್ಲಿರುವ ಲಾಕಪ್‌ನಲ್ಲಿ ಒಂದು ದಿನ ಕಾಲ ಕಳೆದಿದ್ದಾರೆ.
Tumakuru court jails bike owner for 1 day and fines ₹30,000 after a minor riding his bike suffered severe injuries in an accident. First such verdict in Karnataka.

ನ್ಯಾಯಾಧೀಶರು ಬೈಕ್ ಮಾಲೀಕರಿಗೆ ₹25.000 ದಂಡ ಹಾಗೂ ಅವರ ಮಗನಿಗೆ ₹5.000 ದಂಡ ವಿಧಿಸಿದ್ದಾರೆ. (ಬೈಕ್ ಮಾಲೀಕರ ಮಗನೇ 2024ರ ಅಕ್ಟೋಬರ್ 31 ರ ರಾತ್ರಿ 17 ವರ್ಷದ ತನ್ನ ಸ್ನೇಹಿತನಿಗೆ ಮೋಟಾರ್ ಬೈಕ್ ನೀಡಿದ್ದ) ಅಪಘಾತ ಸಂಭವಿಸಿದ ಕೆಲವು ದಿನಗಳ ನಂತರ,
ಅಪ್ರಾಪ್ತ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಅವರ ಹೇಳಿಕೆಯ ಆಧಾರದ ಮೇಲೆ, ಅಜಾಗರೂಕತೆಯಿಂದ ವಾಹನ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಬೈಕ್ ಮಾಲೀಕರು. ಅವರ ಮಗ ಮತ್ತು ಅಪ್ರಾಪ್ತ ಸ್ನೇಹಿತ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಪ್ರಾಪ್ತನ ಪ್ರಕರಣವನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಬೈಕ್ ಚಲಾಯಿಸುತ್ತಿದ್ದ ಅಪ್ರಾಪ್ತನು ಅತಿ ವೇಗದಿಂದ ನಿಯಂತ್ರಣ ಕಳೆದುಕೊಂಡು ಮಣ್ಣಿನ ರಾತಿಗೆ ಡಿಕ್ಕಿ ಹೊಡೆದಿದ್ದ. ಈ ಅಪಘಾತದಲ್ಲಿ ಅಪ್ರಾಪ್ತನ ಕಣ್ಣು, ಸೊಂಟ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಆತನ ಸ್ನೇಹಿತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ. ಈ ಸಂಬಂಧ ಇದೀಗ ಬೈಕ್ ಮಾಲೀಕನಿಗೆ ಒಂದು ದಿನದ ಜೈಲು ಶಿಕ್ಷೆ ಸಹ ವಿಧಿಸಲಾಗಿದೆ.
Bike Owner Jailed & Fined for Minor’s Accident in Tumakuru | Karnataka Court Verdict
Minor accident, bike owner jailed, Tumakuru court verdict, Karnataka road safety, underage driving, reckless driving, road accident, juvenile justice, legal precedent, Bangalore news, rash driving, traffic violation Karnataka