Bike accident : ಭದ್ರಾವತಿ: ತಾಲೂಕಿನ ಅರೆಬಿಳಚಿ ಮತ್ತು ಅರೆಬಿಳಚಿ ಕ್ಯಾಂಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.
ಮೃತನನ್ನು ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ಅನಿಲ್ ಕುಮಾರ್ (23) ಎಂದು ಗುರುತಿಸಲಾಗಿದೆ. ಅನಿಲ್ ಕುಮಾರ್ ಅವರು ತಮ್ಮ ಯಮಹಾ ಬೈಕ್‌ನಲ್ಲಿ ತಡರಾತ್ರಿ ಹೊರಗೆ ಹೋಗಿದ್ದರು. ಬೆಳಗ್ಗೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ನಂತರ, ಪರಿಚಿತರೊಬ್ಬರು ಕುಟುಂಬದವರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ನಾಳೆ ನಗರದ ಕೆಲವೆಡೆ ವಾಹಾನ ಸಂಚಾರ ಮಾರ್ಗ ಬದಲಾವಣೆ : ಎಲ್ಲಿ ಹಾಗೂ ಕಾರಣವೇನು https://malenadutoday.com/route-change-tomarrow-sgivamogga/
ಘಟನಾ ಸ್ಥಳದಲ್ಲಿ ಬೈಕ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತದ ರಭಸಕ್ಕೆ ಅನಿಲ್ ಕುಮಾರ್ ಅವರ ಮುಖಕ್ಕೆ ಗಂಭೀರ ಪೆಟ್ಟು ಬಿದ್ದಿದೆ. ಇದರ ಪರಿಣಾಮವಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Bike accident
