bharat bandh tomorrow : ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತ್ ಬಂದ್‌ಗೆ 10 ಸೆಂಟ್ರಲ್ ಟ್ರೇಡ್ ಯೂನಿಯನ್ ಗಳು ಕರೆ ನೀಡಿವೆ.
ಕೇಂದ್ರ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವು ಹೊಂದಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ರಾಷ್ಟ್ರ ವ್ಯಾಪಿ ಮುಷ್ಕರದಲ್ಲಿ ಬ್ಯಾಂಕಿಂಗ್, ಪೋಸ್ಟಲ್, ವಿಮಾ, ಕಲ್ಲಿದ್ದಲು ಗಣಿ ಕಾರ್ಮಿಕರು ಸೇರಿದಂತೆ 25 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ಔಪಚಾರಿಕ, ಅನೌಪಚಾರಿಯ ವಲಯದ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈ ಭಾರತ್ ಬಂದ್ ನಡೆಸಲು ಕಾರ್ಮಿಕ ಸಂಘಟನೆಗಳು ಕಳೆದ ಕೆಲ ತಿಂಗಳಿನಿಂದ ಭಾರಿ ಸಿದ್ಧತೆ ನಡೆಸಿವೆ. ರೈತರು, ಗ್ರಾಮೀಣಾ ಕಾರ್ಮಿಕರು ಕೂಡ ನಾಳೆಯ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗಿಯಾಗುವರು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರಜೀತ್ ಕೌರ್ ಹೇಳಿದ್ದಾರೆ.
bharat bandh tomorrow : ನಾಳೆಯ ಭಾರತ್ ಬಂದ್‌ನಿಂದ ದೇಶದಲ್ಲಿ ಬ್ಯಾಂಕಿಂಗ್, ಪೋಸ್ಟಲ್, ವಿಮಾ ಸೇವೆ ಹಾಗೂ ಕಲ್ಲಿದ್ದಲು ಗಣಿ, ಕಾರ್ಖಾನೆ, ಟ್ರಾನ್ಸ್ ಪೋರ್ಟ್ಸ್ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ಹಿಂದ್ ಮದ್ದೂರ್ ಸಭಾದ ಹರಭಜನ್ ಸಿಂಗ್ ಸಿಧು ಹೇಳಿದ್ದಾರೆ. ಭಾರತ್ ಬಂದ್ ಸಂಘಟಕರ ಪ್ರಕಾರ, ನಾಳೆ ಬ್ಯಾಂಕಿಂಗ್ ಚಟುವಟಿಕೆಯಲ್ಲೂ ವ್ಯತ್ಯಯವಾಗಲಿದೆ. ನಾಳೆಯ ಬಂದ್ ನಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳು ಹಾಗೂ ಕೋ ಅಪರೇಟೀವ್ ವಲಯದ ಬ್ಯಾಂಕ್ ಉದ್ಯೋಗಿಗಳು ಕೂಡ ಭಾಗಿಯಾಗುವರು. ಇದರಿಂದಾಗಿ ದೈನಂದಿನ ಬ್ಯಾಂಕಿಂಗ್ ಚಟುವಟಿಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಂದ್ ಸಂಘಟಕರು ಹೇಳಿದ್ದಾರೆ.

bharat bandh tomorrow ಪ್ರತ್ಯೇಕವಾಗಿ ಬ್ಯಾಂಕಿಂಗ್ ಯೂನಿಯನ್ ಗಳು ನಾಳೆ ಭಾರತ್ ಬಂದ್ ನಲ್ಲಿ ಭಾಗಿಯಾಗುವುದನ್ನು ಖಚಿತಪಡಿಸಿಲ್ಲ.ನಾಳೆ ದೇಶದಲ್ಲಿ ಶಾಲೆ, ಕಾಲೇಜು, ಯೂನಿರ್ವಸಿಟಿಗಳು ಓಪನ್ ಆಗಿರಲಿವೆ. ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಶಾಲಾ ಬಸ್ ಚಾಲಕರು ಮುಷ್ಕರದಲ್ಲಿ ಭಾಗಿಯಾದರೆ ಪೋಷಕರು ಮಕ್ಕಳನ್ನು ತಾವೇ ಕರೆದುಕೊಂಡು ಹೋಗಿ ಶಾಲೆಗೆ ಬಿಡಬೇಕಾಗುತ್ತೆ.
ನಾಳೆ ಸಾರ್ವಜನಿಕ ಸಾರಿಗೆ ಬಸ್ ಸೇವೆಯಲ್ಲೂ ವ್ಯತ್ಯಯವಾಗಬಹುದು. ಆ್ಯಪ್ ಆಧರಿತ ಟ್ಯಾಕ್ಸಿ, ಕ್ಯಾಬ್ ಸೇವೆ ಕೂಡ ವ್ಯತ್ಯಯವಾಗಬಹುದು. ಸಾರ್ವಜನಿಕ ಸಾರಿಗೆ ಸಿಬ್ಬಂದಿ, ಟ್ಯಾಕ್ಸಿ, ಕ್ಯಾಬ್ ಚಾಲಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುವರು ಎಂದು ಭಾರತ್ ಬಂದ್ ಸಂಘಟಕರು ಹೇಳಿದ್ದಾರೆ.
ರೈಲ್ವೇ ಯೂನಿಗಳು ಭಾರತ್ ಬಂದ್ ನಲ್ಲಿ ಭಾಗಿಯಾಗುತ್ತಿಲ್ಲ. ಭಾರತ್ ಬಂದ್‌ನಲ್ಲಿ ಭಾಗಿಯಾಗುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.ಟ್ರೇಡ್ ಯೂನಿಯನ್‌ಗಳು ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ನಿರ್ಲಕ್ಷ್ಯ ಮಾಡಿವೆ ಎಂದು ಹೇಳಿವೆ. ಕಳೆದ ವರ್ಷವೇ ಕೇಂದ್ರದ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯಾಗೆ 17 ಪಾಯಿಂಟ್‌ಗಳ ಚಾರ್ಟರ್ ಬೇಡಿಕೆಯನ್ನು ಸಲ್ಲಿಸಿದ್ದೇವು. ಇದರ ಬಗ್ಗೆ ಯಾವುದೇ ಗಂಭೀರ ಪ್ರತಿಕ್ರಿಯೆಯನ್ನು ಕೇಂದ್ರ ಸರ್ಕಾರ ನೀಡಿಲ್ಲ. ದೇಶದ ಕಲ್ಯಾಣ ರಾಜ್ಯದ ಸ್ಥಾನಮಾನವನ್ನ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕೇಂದ್ರ ಸರ್ಕಾರ ಬರೀ ವಿದೇಶಿ, ಭಾರತೀಯ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ನೀತಿಗಳಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಟ್ರೇಡ್ ಯೂನಿಗಳು ಹೇಳಿವೆ.
bharat bandh tomorrow : ಬಂದ್‌ಗೆ ಕರೆ ಕೊಟ್ಟಿದ್ದೇಕೆ..? ಬೇಡಿಕೆಗಳೇನು?
ಕಳೆದ 10 ವರ್ಷಗಳಿಂದ ಭಾರತೀಯ ಕಾರ್ಮಿಕರ ಸಮ್ಮೇಳನವನ್ನು ಕೇಂದ್ರ ಸರ್ಕಾರ ನಡೆಸಿಲ್ಲ
ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್ ಗಳಿಂದ ಯೂನಿಯನ್‌ಗಳು ದುರ್ಬಲವಾಗುತ್ತವೆ.ಜೊತೆಗೆ ಕಾರ್ಮಿಕರ ಕೆಲಸದ ಅವಧಿ ಹೆಚ್ಚಳವಾಗುತ್ತೆ.
ಕೇಂದ್ರ ಸರ್ಕಾರವು ಗುತ್ತಿಗೆ ನೌಕರಿಯನ್ನು ಪೋತ್ಸಾಹಿಸುತ್ತಿದ್ದು, ಖಾಸಗೀಕರಣ ಮಾಡುತ್ತಿದೆ. ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ನೇಮಕಾತಿ ಬೇಡಿಕೆಯನ್ನು ಕಡೆಗಣಿಸಿದೆ. ಕೂಲಿ ಹೆಚ್ಚಳ ಮಾಡಿಲ್ಲ.
ನಿರುದ್ಯೋಗ ಸಮಸ್ಯೆ ನಿವಾರಿಸದೆ ಉದ್ಯೋಗದಾತರಿಗೆ ಇನ್ವೆಂಟೀವ್ ನೀಡುತ್ತಿದೆ.
ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗುತ್ತಿದೆ. ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ.
ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವೆಚ್ಚವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂದು ಟ್ರೇಡ್ ಯೂನಿಯನ್ ಗಳು ಆರೋಪಿಸಿವೆ.