ಮಾಚೇನಹಳ್ಳಿ : ಒಮಿನಿಯಲ್ಲಿ ದರೋಡೆಗೆ ಸ್ಕೆಚ್​ ಹಾಕಿದ್ದ ದನಕಳ್ಳರು! ಮದ್ಯರಾತ್ರಿಯಲ್ಲಿ ಭದ್ರಾವತಿ ಪೊಲೀಸರ ಕಾರ್ಯಾಚರಣೆ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025:   ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋಗುವ ರಸ್ತೆಯಲ್ಲಿ ದರೋಡೆಗೆ ಸಂಚು ರೂಪಿಸಿದ್ದವರನ್ನ ಭದ್ರಾವತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೈಯಲ್ಲಿ ಲಾಂಗು, ಚಾಕು ಹಿಡಿದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.  

ಜಾತಿ ಗಣತಿ ಕರ್ತವ್ಯಕ್ಕೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳ ದಾಳಿ : ಗಂಭೀರ ಗಾಯ 

- Advertisement -

ಭದ್ರಾವತಿ ನ್ಯೂ ಟೌನ್​ ಪೊಲೀಸ್ ಠಾಣೆ  Bhadravathi Police

ಅಕ್ಟೋಬರ್ 13, 2025 ರಂದು ರಾತ್ರಿ 11:45 ರ ಹೊತ್ತಿಗೆ ನಡೆದ ಘಟನೆ ಇದು. ಮಾಚೇನಹಳ್ಳಿಯ ಬಳಿ ಕೆಲವರು ಮಾರಕಾಸ್ತ್ರ ಹಿಡಿದು ಒಮಿನಿ ವ್ಯಾನ್​ ಒಂದರ ಬಳಿ ನಿಂತಿದ್ದಾರೆ ಎಂಬ ಮಾಹಿತಿ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಕವಿತಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಟೀಂ ಎಎಸ್‌ಐ ಟಿ.ಪಿ. ಮಂಜಪ್ಪ,ಹೆಚ್‌ಸಿ ನವೀನ್ , ಹೆಚ್‌ಸಿ ಗೂಳ್ಯಪ್ಪ, ಹೆಚ್‌ಸಿ ರಾಘವೇಂದ್ರ, ಇತರ ಸಿಬ್ಬಂದಿ ಜೊತೆಯಲ್ಲಿ ಸ್ಥಳಕ್ಕೆ ತೆರಳಿದ್ದಾರೆ. 

 Bhadravathi Police Thwart Major Dacoity Plot; Four Suspects Caught with Weapons
Bhadravathi Police Thwart Major Dacoity Plot; Four Suspects Caught with Weapons

 ಸ್ಮಶಾನದ ಬಳಿ ನಿಂತಿದ್ದ ಆರೋಪಿಗಳು / Bhadravathi Police

ರಾತ್ರಿ 12:45 ರ  ಹೊತ್ತಿಗೆ ಆರೋಪಿ ಪೊಲೀಸರ ಕಣ್ಣಿಗೆ ಸೈಟ್ ಆಗಿದ್ದಾರೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಸಮೀಪ ಸಿಗುವ ಸ್ಮಶಾನದ ಬಳಿ, ಆರೋಪಿಗಳು ಚಾಕು, ಲಾಂಗ್ ಹಿಡಿದು ಏನೋ ಒಂದು ಕೃತ್ಯಕ್ಕೆ ಸ್ಕೆಚ್ ಹಾಕುತ್ತಿರುವುದು ಕಾಣಿಸಿದೆ. ವಿಚಾರ ಸ್ಪಷ್ಟವಾಗುತ್ತಲೇ ಪೊಲೀಸರು ರೇಡ್ ಮಾಡಿದ್ದಾರೆ. ಅಷ್ಟರಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.  ಈ ವೇಳೆ ಬೆನ್ನಟ್ಟಿದ ಪೊಲೀಸ್ ಸಿಬ್ಬಂದಿ ನಾಲ್ವರನ್ನ ವಶಕ್ಕೆ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. 

ಭದ್ರಾವತಿ : ಭದ್ರಾ ನದಿಗೆ ಬಿದ್ದು ಪೊಲೀಸ್ ಹೆಡ್​ ಕಾನ್​ಸ್ಟೆಬಲ್​ ಸಾವು!

ಬಂಧಿತ ಆರೋಪಿಗಳು ಗಾರೆ , ಕೂಲಿ, ಪೇಂಟಿಂಗ್ ಕೆಲಸ ಮಾಡುವವರು. ಜನ್ನಾಪುರ, ವೇಲೂರು ಶೆಡ್ಡ, ಹುತ್ತಾ ಕಾಲೋನಿ ವಾಸಿಗಳು.  ಈ ಆರೋಪಿಗಳು ಇತ್ತೀಚೆಗೆ  ಭದ್ರಾವತಿಯ ಜಿಂಕ್ ಲೈನ್, ಭಂಡಾರಹಳ್ಳಿ ಮತ್ತು ಹೊಸ ಸಿದ್ಧಾಪುರ ಏರಿಯಾಗಳಲ್ಲಿ ನಡೆಯುತ್ತಿದ್ದ ದನಗಳ್ಳತನದ ಪ್ರಕರಣಗಳಲ್ಲಿ ಭಾಗಿಯಾದವರು ಎನ್ನಲಾಗಿದೆ. ಇನ್ನೂ ಆರೋಪಿಗಳು ದರೋಡೆಗೆ ಸ್ಕೆಚ್ ಹಾಕಿದ್ದರು ಎಂಬುದನ್ನು ಪೊಲೀಸರು ವಿಚಾರಣೆಯಲ್ಲಿ ಕಂಡುಕೊಂಡಿದ್ದಾರೆ. 

ಈ ಸಂಬಂಧ ಸ್ವತಃ ಪಿಎಸ್​ಐ ಗೀತಾ ಕಂಪ್ಲೆಂಟ್ ದಾರರಾಗಿ ಎಫ್​ಐಆರ್ ದಾಖಲಿಸಿದ್ದು, THE BHARATIYA NYAYA SANHITA (BNS), 2023 (U/s-310(4),310(5)) ಅಡಿಯಲ್ಲಿ ಸುಮುಟೋ ಕೇಸ್​ ದಾಖಲಿಸಲಾಗಿದೆ. ಅಲ್ಲದೆ ಆರೋಪಿಗಳಿಂದ  28 ಇಂಚು ಉದ್ದದ ಮರದ ದೊಣ್ಣೆ,  27 ಇಂಚು  ಉದ್ದದ ಲಾಂಗ್ ಮತ್ತು ಖಾರದ ಪುಡಿ ಪ್ಯಾಕೆಟ್​, 19 ಇಂಚು ಉದ್ದದ ಚಾಕು ಹಾಗೂ  ಮರದ ವಿಕೆಟ್ ಅನ್ನು ಜಪ್ತು ಮಾಡಿದ್ದಾರೆ. ಇದಷ್ಟೆ ಅಲ್ಲದೆ ಆರೋಪಿಗಳು ಓಡಾಡುತ್ತಿದ್ದ ಒಮಿನಿಯಲ್ಲಿ ಲಾಂಗು, ಚಾಕು ಇತ್ಯಾದಿ ವಸ್ತುಗಳು ಸಿಕ್ಕಿದ್ದು ಮಹಜರ್​ ನಡೆಸಿ ವಸ್ತುಗಳನ್ನು ಸೀಜ್​ ಮಾಡಿದ್ದಾರೆ ಪೊಲೀಸರು. 

ಭದ್ರಾವತಿ: ಗಣಪತಿ ವಿಸರ್ಜನೆ ವೇಳೆ ಗಲಾಟೆ; ಹೆಡ್ ಕಾನ್‌ಸ್ಟೇಬಲ್‌ ಮೇಲೆ ಹಲ್ಲೆ

 Bhadravathi Police Thwart Major Dacoity Plot; Four Suspects Caught with Weapons
Bhadravathi Police Thwart Major Dacoity Plot; Four Suspects Caught with Weapons

 Bhadravathi Police Thwart Major Dacoity Plot; Four Suspects Caught with Weapons

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *