ಭದ್ರಾವತಿ, ಆಗಸ್ಟ್ 6: malenadu today news /ನೆರೆಮನೆಯ ಮಹಿಳೆಯ ಮೇಲೆ ಮಚ್ಚಿನಿಂದ ಮಾರಣಾಂತಿಕ (fatal) ಹಲ್ಲೆ ನಡೆಸಿದ ಆರೋಪಿಗೆ ಭದ್ರಾವತಿ ಕೋರ್ಟ್ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹35,000 ದಂಡ ವಿಧಿಸಿದೆ.
ನಡೆದಿದ್ದೇನು?
ದಿನಾಂಕ 27-03-2021 ರಂದು ನಡೆದ ಘಟನೆ ಇದಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮರನಹಳ್ಳಿ ತಾಂಡ್ಯಾದಲ್ಲಿ, ಅಲ್ಲಿನ ನಿವಾಸಿ ತಾವರಾನಾಯ್ಕ ತನ್ನ ಪಕ್ಕದ ಮನೆಯ ನಿವಾಸಿ ಜಯಾಬಾಯಿ ಎಂಬಾಕೆ ಜೊತೆ ಕಿರಿಕ್ ತೆಗೆದಿದ್ದ. ಅಲ್ಲದೆ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಜಯಾಬಾಯಿರವರ ಮಗಳು ನೀಡಿದ ದೂರಿನ ಆಧಾರದ ಮೇಲೆ, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅಂದಿನ ಎಎಸ್ಐ ಮಂಜೇಶ್, ಕೇಸ್ ಸಂಬಂಧ ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಪ್ರಕರಣದ ಸಂಬಂಧ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (seat of justice) ವಿಚಾರಣೆ ನಡೆದಿತ್ತು ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಇದೀಗ ಪ್ರಕರಣದ ತೀರ್ಪು ನೀಡಿದ್ದಾರೆ.
