belur gopalakrishna ಕಾಂಗ್ರೆಸ್ನ ಹಿರಿಯ ಶಾಸಕ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ರಾಜಿವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಮನೆ ಹಂಚಿಕೆ ವಿಚಾರದಲ್ಲಿ ಭ್ರಷ್ಟಚಾರವಾಗಿದೆ ಎಂದು ಆರೋಪಿಸಿರುವ ಆಡಿಯೋವೊಂದು ವೈರಲ್ ಆಗಿತ್ತು. ಈ ಆಡಿಯೋ ಸಂಬಂಧ ಇದೀಗ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶಾಸಕ ಬೇಳೂರು ಗೋಪಾಲಕೃಷ್ಣ , ಆಡಿಯೋ ವಿಚಾರದಲ್ಲಿ ಮುಜುಗರ ತಪ್ಪಿಸಲು ಸಚಿವರು ರಾಜೀನಾಮೆ ನೀಡುವುದು ಒಳ್ಳೇಯದು ಎಂದಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಳಿಬರುತ್ತಿರುವ ಆರೋಪದಿಂದಾಗಿ ಸರ್ಕಾರಕ್ಕೆ ಮುಜುಗರ ತಂದಿದೆ. ಹಾಗಾಗಿ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಎದುರಿಸಲಿ. ತನಿಖೆ ಮುಗಿದ ಬಳಿಕ ಬೇಕಾದರೆ ಮತ್ತೆ ಅವರು ಮಂತ್ರಿಯಾಗಿ ಮುಂದುವರೆಯಬಹುದು. ಈ ಹಿಂದೆ ಅನೇಕ ಮಂತ್ರಿಗಳು ಬೇರೆ ಬೇರೆ ಹಗರಣಗಳಲ್ಲಿ ರಾಜೀನಾಮೆ ನೀಡಿದ್ದಾರೆ.ಅವರು ತಪ್ಪಿತಸ್ಥರು ಅಲ್ಲ ಎಂದ ತಕ್ಷಣ ಮತ್ತೆ ಅವರನ್ನು ಮಂತ್ರಿ ಸ್ಥಾನಕ್ಕೆ ತೆಗೆದುಕೊಳ್ಳುವ ಅವಕಾಶ ಇದೆ ಎಂದು ಹೇಳಿದರು.
belur gopalakrishna ಪ್ರಧಾನಿ ಮೋದಿ ಮೊದಲು ರೈತರ ಪರ ನಿಲ್ಲಲಿ
ದೇಶದಲ್ಲಿ ರೈತರು ತಾವು ಬೆಳೆಯುವ ಬೆಳೆಗಳಿಗೆ ಸಿಂಪಡಿಸುವ ರಸಗೊಬ್ಬರ ರೇಟ್ನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಪ್ರತಿ ಚೀಲದ ಮೇಲೆ 160 ರಿಂದ 180 ರೂಪಾಯಿಗಳು ಹೆಚ್ಚಾಗಿದ್ದು, ಇದರಿಂದ ಸಣ್ಣಪುಟ್ಟ ರೈತರಿಗೆ ಸಮಸ್ಯೆಯಾಗುತ್ತಿದೆ. ನಮ್ಮ ಸರ್ಕಾರದಲ್ಲಿ ಒಂದು ರೂಪಾಯಿ ಹಾಲಿನ ರೇಟ್ ಜಾಸ್ತಿಯಾದಾಗ , ರಾಜ್ಯದ ಬಿಜೆಪಿ ಮುಖಂಡರು ಬಾಯಿ ಬಡ್ಕೋತ್ತಾರೆ. ಆದರೆ ಇವತ್ತು ಯಾಗೆ ಮಾತನಾಡುತ್ತಿಲ್ಲ ಎಂಬುದು ತಿಳಿದಿಲ್ಲ,ಪ್ರಧಾನಿ ಮೋದಿ ಮೊದಲು ರೈತರ ಪರ ನಿಲ್ಲಲಿ ಎಂದರು.
