Anchor anushree : ಆ್ಯಂಕರ್ ಅನುಶ್ರೀ ಮದುವೆಗೆ ಡೇಟ್ ಫಿಕ್ಸ್
ಕನ್ನಡದ ಪ್ರಸಿದ್ದ ನಿರೂಪಕಿ ಅನುಶ್ರೀ ಮದುವೆ ನಿಗದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಮದುವೆ ದಿನಾಂಕ ಯಾವಾಗ ಎಂದು ಬಹಿರಂಗ ಗೊಂಡಿರಲಿಲ್ಲ. ಇದೀಗ ಆ್ಯಂಕರ್ ಅನುಶ್ರೀ ಮದುವೆ ದಿನಾಂಕ ಬಹಿರಂಗಗೊಂಡಿದ್ದು ಆಗಸ್ಟ್ 28ರಂದು ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕೊಡಗು ಮೂಲದ ಉದ್ಯಮಿ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದು, ಆಗಸ್ಟ್ 28ರಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಬೆಳಗ್ಗೆ 10:56 ರ ಶುಭ ಮೂಹೂರ್ತದಲ್ಲಿ ಮದುವೆ ಕಾರ್ಯಕ್ರಮ ನೆರವೇರಲಿದೆ.