Agnipath Soldier Missing ಬೆಂಗಳೂರಿನ ಎಂಇಜಿ ಕೇಂದ್ರದಿಂದ ಅಗ್ನಿವೀರ್ ಯೋಧ ನಾಪತ್ತೆ: ಪೊಲೀಸರಿಂದ ಶೋಧ
ಬೆಂಗಳೂರು: ಬೆಂಗಳೂರಿನ ಹಲಸೂರು ಪೊಲೀಸರು ಜೂನ್ 25, ಬುಧವಾರದಂದು ಎಂಇಜಿ ಕೇಂದ್ರದಿಂದ ನಾಪತ್ತೆಯಾಗಿರುವ 20 ವರ್ಷದ ಅಗ್ನಿವೀರ್ ಯೋಧ ದಯ್ಯಾಲ ಸತೀಶ್ ಅವರ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯವರಾದ ಸತೀಶ್, ತಾವು ತರಬೇತಿ ಪಡೆಯುತ್ತಿದ್ದ ಬ್ಯಾಚ್‌ನ ಅಪ್ಲಿಕೇಶನ್ ಗ್ರೂಪ್‌ನಲ್ಲಿ ಸಂದೇಶವೊಂದನ್ನು ಹಾಕಿದ್ದರು. ಅದಾದ ಬಳಿಕ ನಾಪತ್ತೆಯಾಗಿದ್ದರು. ತಮ್ಮ ಮೆಸೆಜ್ ನಲ್ಲಿ ಕಾಲು ನೋವಿನಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ತರಬೇತಿ ಸೆಷನ್‌ಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.

ಸತೀಶ್ ತಂದೆ ದಯ್ಯಾಲ ಕೊಮಾರಯ್ಯ (ರೈತರು), ಎಂಇಜಿ ಕೇಂದ್ರದಿಂದ ಮಾಹಿತಿ ಪಡೆದ ಬಳಿಕ ತಮ್ಮ ಮಗ ಜೂನ್ 25 ರಿಂದ ಕಾಣೆಯಾಗಿದ್ದಾನೆ ಎಂದು ಹಲಸೂರು ಪೊಲೀಸರಿಗೆ ದೂರು ನೀಡಿದ್ದಾರೆ. ಸತೀಶ್ ನಾಪತ್ತೆ ಪ್ರಕರಣವು ಬೆಂಗಳೂರಿನಲ್ಲಿ ಸದ್ಯ ಚರ್ಚೆಯ ವಿಷಯವಾಗಿದ್ದು, ಆತಂಕ ಮೂಡಿಸಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಶೀಘ್ರದಲ್ಲೇ ಸತೀಶ್ ಅವರನ್ನು ಪತ್ತೆಹಚ್ಚುವ ಭರವಸೆ ನೀಡಿದ್ದಾರೆ.
