SSLC ರಿಸಲ್ಟ್​ ಬಗ್ಗೆ ಇಲ್ಲಿದೆ ಸಿಂಪಲ್​ ಅಪ್ಡೇಟ್

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 10, 2025

ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಎಸ್​ ಎಸ್​ ಎಲ್ ಸಿ ಪರೀಕ್ಷೆ ಫಲಿತಾಂಶ ಏಪ್ರಿಲ್​ ಕೊನೆಯ ವಾರ ಅಥವಾ ಮೇ ಮೊದಲ ವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು  ಮಾರ್ಚ್ 21 ರಿಂದ ಏಪ್ರಿಲ್ 4, 2025 ರವರೆಗೆ ನಡೆಸಿತ್ತು. ರಾಜ್ಯದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್​ಎಸ್​ ಎಸ್​ಸಿ ಪರೀಕ್ಷೆಯನ್ನು ಬರೆದಿದ್ದರು. ಏಪ್ರಿಲ್​ 15 ನಂತರ ಸರಿಸುಮಾರು 75 ಸಾವಿರಕ್ಕೂ ಅಧಿಕ ಶಿಕ್ಷಕರಿಂದ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಗಳು ಆರಂಭವಾಗಲಿದ್ದು, ತದನಂತರ ಪರೀಕ್ಷಾ ಮಂಡಳಿ ಫಲಿತಾಂಶದ ದಿನಾಂಕವನ್ನು ಅಧೀಕೃತವಾಗಿ ಘೋಷಿಸಲಿದೆ.  

ಫಲಿತಾಂಶ ಚೆಕ್​ ಮಾಡೋದು ಹೇಗೆ

ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯಮಾಪನ ಮಂಡಳಿಯ ಅಧೀಕೃತ ವೆಬ್ ಸೈಟ್​ ಆದಂತಹ kseab.karnataka.gov.in, ಹಾಗೂ   karresults.nic.in ಈ ಲಿಂಕ್​ನ್ನು ಬಳಸಿ ತಮ್ಮ ಫಲಿತಾಂಶವನ್ನು ಚೆಕ್​ ಮಾಡಿಕೊಳ್ಳಬಹುದು.

SUMMARY | The results of the SSLC exams are likely to be announced in the last week of April or the first week of May.

KEYWORDS |  SSLC,  result, exams,  April, may,  

Share This Article