SHIVAMOGGA| MALENADUTODAY NEWS | ಮಲೆನಾಡು ಟುಡೆ Mar 8, 2025
ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸೌಜನ್ಯ ಸಾವಿನ ಪ್ರಕರಣ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಈ ಸಂಬಂಧ ಸಮೀರ್ ಎಂಡಿ ಎಂಬವರು ದೂತ ಹೆಸರಿನ ಯೂಟ್ಯೂಬ್‌ನಲ್ಲಿ ಮಾಡಿರುವ ವಿಡಿಯೋ ಒಂದು ಕೋಟಿ ಎಪತ್ತು ಲಕ್ಷ ವಿವ್ಸ್ ಪಡೆದುಕೊಂಡಿದೆ.
ವಿಡಿಯೋದ ಕಟ್ ದೃಶ್ಯಗಳನ್ನು ಜನರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಇನ್ನೊಂದೆಡೆ ಈ ವಿಡಿಯೋದ ಬೆನ್ನಲ್ಲೆ ಇನ್ನಷ್ಟು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಸೌಜನ್ಯ ಪ್ರಕರಣದ ಸಂಬಂಧ ವಿಡಿಯೋಗಳನ್ನು ರಿಲೀಸ್ ಮಾಡುತ್ತಿದ್ದರು.
ಪವಿತ್ರ ಕ್ಷೇತ್ರದ ಸುತ್ತಮುತ್ತ ನಡೆದ ಕ್ರೈಂ ಪ್ರಕರಣಗಳ ಹಿಂದಿನ ಅನುಮಾನಗಳನ್ನು ಇಟ್ಟುಕೊಂಡು ಎಐ ಗ್ರಾಫಿಕ್ಸ್ ಬಳಸಿಕೊಂಡು ಭಿತ್ತರ ಮಾಡಲಾಗಿರುವ ಸಮೀರ್ ಎಂಡಿಯ ವಿಡಿಯೋ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತಿದೆ.
ಅಲ್ಲದೆ ಈ ಸಂಬಂಧ ದಾಖಲ ಎಫ್‌ಐಆರ್ ಅಡಿಯಲ್ಲಿ ಪೊಲೀಸರು ಸಮೀರ್ ಎಂಡಿಗೆ ನೋಟಿಸ್ ಕೊಟ್ಟು ಅರೆಸ್ಟ್ ಮಾಡುವ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ನೋಟಿಸ್ ಜೊತೆಗೆ ಎಫ್‌ಐಆರ್ ಅಂಟಿಸದನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು ಪೊಲೀಸರಿಗೆ ತಡೆ ನೀಡಿದರು.
ಇನ್ನು, ಸಮೀರ್ ಎಂಡಿಯವರ ವಿಡಿಯೋ ಪೊಲೀಸ್ ಇಲಾಖೆಯಿಂದ ಹೊರಬಂದ ಗಿರೀಶ್ ಮೆಟ್ಟನ್ನವರ್ ತಮ್ಮ ವೈಯಕ್ತಿಕವಾಗಿ ಪ್ರತಿ ಪ್ರಕರಣದಲ್ಲಿ ಪರಿಶೀಲಿಸಿದ್ದನ್ನು ಉಲ್ಲೇಖಿಸಿದೆ. ಅಲ್ಲದೆ ಗಿರೀಶ್ ಮೆಟ್ಟನ್ನವರ್‌ರವರು ಸಹ ಇದೇ ವಿಚಾರದ ಬಗ್ಗೆ ವಿವಿಧ ಸೋಶಿಯಲ್ ಮೀಡಿಯಾಗಳಿಗೆ ಸಂದರ್ಶನ ನೀಡುತ್ತಿದ್ದು, ತಮ್ಮ ಹೋರಾಟ ಕ್ಷೇತ್ರ ಅಥವಾ ದೇವರ ವಿಚಾರವಾಗಿ ಅಲ್ಲ. ಆದರೆ ಅಲ್ಲಿರುವ ವ್ಯಕ್ತಿಗಳ ಬಗ್ಗೆ, ಅವರ ವಿಕೃತಿ ಹಾಸದ ಸಿಡಿ ಪ್ರಕರಣದಂತೆ ಪೂರ್ತಿಯಾಗಿ ಬಯಲಾಗಲಿದೆ ಎಂದಿದ್ದಾರೆ.
Dharmasthala soujanya case what happened,third eye sowjanya case ,sowjanya case story in kannada, sowjanya case sameer md