ತಾಳಿ ಕಟ್ಟುವ ವೇಳೆ ವರ ಎಸ್ಕೇಪ್ | ಸೌಜನ್ಯಾ ಕೇಸ್, SM ಅಲರ್ಟ್ | ಮದ್ವೆಗಾಗಿ ಟವರ್ ಏರಿದ ಯುವಕ | ಟೋಲ್, ಟೆಂಪಲ್‌ನಲ್ಲಿ ಪೊಲೀಸ್ ID ಬಳಕೆ, ಅರೆಸ್ಟ್ | ಥರಥರ ಸುದ್ದಿ
banglore news and thara thara suddi

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 6, 2025
ಮದುವೆ ಮಂಟಪದಿಂದ ವರ ಎಸ್ಕೇಪ್
ಇನ್ನೇನು ಅರಶಿನಶಾಸ್ತ್ರ ಮುಗಿದು ಮದುವೆ ದಾರೆ ಪ್ರಕ್ರಿಯೆಗಳು ಆರಂಭವಾಗಬೇಕು ಎನ್ನುವಷ್ಟರಲ್ಲಿಯೇ ಮಧಮಗ & ಫ್ಯಾಮಿಲಿ ಕಲ್ಯಾಣ ಮಂಟಪದಿಂದ ಎಸ್ಕೇಪ್ ಆದ ಬಗ್ಗೆ ಬೆಂಗಳೂರಲ್ಲಿ ವರದಿಯಾಗಿದೆ. ಇಲ್ಲಿನ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ FIR ಸಹ ದಾಖಲಾಗಿದೆ. ಮಧು ಮಗ ಪ್ರೀತಿಸಿದ ಯುವತಿಯ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಈ ನಡುವೆ ಮಧು ಮಗ ತನಗೆ 50 ಲಕ್ಷ ಕ್ಯಾಶ್ ಹಾಗೂ ಅರ್ಧ ಕೆಜಿ ಚಿನ್ನ ಮತ್ತೆ ಮರ್ಸಿಡಿಸ್ ಕಾರು ಬೇಕು ಎಂದು ಪಟ್ಟು ಹಿಡಿದಿದ್ದ. ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ತನ್ನ ಕುಟುಂಬದ ಸಮೇತ ಮಧುಮಗ ಎಸ್ಕೇಪ್ ಆಗಿದ್ದಾನೆ.
ಸಮೀರ್ ವಿಡಿಯೋ? ಅಲರ್ಟ್‌ಗೆ ಸೂಚನೆ
ಧರ್ಮಸ್ಥಳದಲ್ಲಿ ಈ ಹಿಂದೆ ನಡೆದ ಸೌಜನ್ಯಾ ಕೊಲೆ ಪ್ರಕರಣ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣವಾಗಿದ್ದು, ಸಮೀರ್ ಎಂಬ ಯೂಟ್ಯೂಬರ್‌ನ ವಿಡಿಯೋ. ಈತನ ವಿಡಿಯೋ ರಿಲೀಸ್ ಆಗುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ, ಪ್ರತಿ ಜಿಲ್ಲಾ ಪೊಲೀಸ್ ವಿಭಾಗದಲ್ಲಿ ರಚನೆ ಯಾಗಿರುವ ಸಾಮಾಜಿಕ ಜಾಲತಾಣಗಳ ನಿಗಾ ಘಟಕಗಳನ್ನು ಅಲರ್ಟ್ ಆಗಿರಿಸುವಂತೆ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ. ಸಮೀರ್ ವಿಡಿಯೋ ಸಂಬಂಧ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ, ನಿಗಾ ಘಟಕಗಳು ನಿರ್ಲಕ್ಷ್ಯ ವಹಿಸಿವೆ ಎಂದಿರುವ ಅವರು, ಈ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟಿಕೊಂಡಿದ್ದು, ಕಾನೂನು ಸುವ್ಯವಸ್ಥೆ ಧಕ್ಕೆಯಾಗುವ ಸಂಭವವಿದೆ, ಹೀಗಾಗಿ ನಿಗಾ ವಹಿಸಿ ಎಂದು ಸೂಚಿಸಿದ್ದಾರೆ.
ಆಸ್ತಿಕೊಡಿ, ಮದುವೆ ಮಾಡಿಸಿ
ತ್ರಿಕೋಟಾದ ಕೊಟ್ಯಾಳದಲ್ಲಿ ಯುವಕನೊಬ್ಬ ತನಗೆ ಮದುವೆ ಮಾಡಿ, ಆಸ್ತಿಯಲ್ಲಿ ಪಾಲು ಕೊಡಿ ಎಂದು ಗಲಾಟೆ ಮಾಡಿ ಮೊಬೈಲ್ ಟವರ್ ಏರಿ ರಾತ್ರಿಯಿಡಿ ಪ್ರತಿಭಟಿಸಿದ ಬಗ್ಗೆ ವರದಿಯಾಗಿದೆ. ಕಳೆದ ಮಂಗಳವಾರ ರಾತ್ರಿ ತಂದೆ ಜತೆ ಜಗಳವಾಡಿದ್ದ ಪುತ್ರ ಆ ಬಳಿಕ ಮೊಬೈಲ್ ಟವರ್ ಏರಿ ಕುಳಿತಿದ್ದ. ರಾತ್ರಿಯಿಡಿ ಅಲ್ಲಿಯೇ ಪ್ರತಿಭಟಿಸಿದ್ದ. ಆದರೆ ಅದನ್ನು ಯಾರು ಗಮನಿಸಲಿರಲಿಲ್ಲ. ಮರುದಿನ ಬೆಳಗ್ಗೆ ಈತ ಟವರ್ ಏರಿರುವುದನ್ನು ಸ್ಥಳೀಯರು ಗಮನಿಸಿ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿದ್ದಾರೆ. ಕೊನೆಗೆ ಎಲ್ಲರೂ ಸೇರಿ ಮನವೊಲಿಸಿ ಯುವಕನನ್ನು ಕೆಳಕ್ಕೆ ಇಳಿಸಿದರು
ಟೋಲ್, ಟೆಂಪಲ್‌ಗಾಗಿ ಪೊಲೀಸ್ ಐಡಿ
ಬೆಂಗಳೂರು ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ 36 ವರ್ಷದ ಯುವಕನೊಬ್ಬ ಟೋಲ್ ಗೇಟ್‌ಗಳಲ್ಲಿ ವಿನಾಯಿತಿ ಪಡೆಯಲು, ದೇವಾಲಯಗಳಲ್ಲಿ ವಿಶೇಷ ದರ್ಶನ ಪಡೆಯಲು ಪೊಲೀಸ್ ಇನ್‌ಸ್ಪೆಕ್ಟರ್ ಹೆಸರಿನ ನಕಲಿ ಐಡಿ ಕಾರ್ಡ್ ಮಾಡಿಕೊಂಡು ಓಡಾಡುತ್ತಿದ್ದ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕಾನ್‌ಸ್ಟೇಬಲ್ ಒಬ್ಬರ ಐಡಿ ನಂಬರ್‌ನ್ನ ಬಳಸಿಕೊಂಡು ನಗರ ವಿಭಾಗದ ಇನ್‌ಸ್ಪೆಕ್ಟರ್ ಎಂದು ಹೆಸರು ಹಾಕಿಸಿಕೊಂಡು ಪೊಲೀಸ್ ಇಲಾಖೆಯ ಮಾದರಿಯಲ್ಲಿಯೇ ಐಡಿ ಕಾರ್ಡ್ ಮಾಡಿಸಿಕೊಂಡಿದ್ದ. ಜೆರಾಕ್ಸ್ ಅಂಗಡಿಯಲ್ಲಿ ಈ ಐಡಿ ಸಿದ್ದಪಡಿಸಿದ್ದ ಈತ ಟೋಲ್‌ಗೇಟ್‌ಗಳಲ್ಲಿ ಶುಲ್ಕ ಕಟ್ಟದಿರಲು ಹಾಗೂ ವಿಐಪಿ ದರ್ಶನಕ್ಕಾಗಿ ಐಡಿ ಕಾರ್ಡ್ ಬಳಸಿಕೊಳ್ಳುತ್ತಿದ್ದನಂತೆ. ಈ ಮಧ್ಯೆ ಅನುಮಾನಸ್ಪದ ಯುವಕನ ಬಗ್ಗೆ ಇನ್ಫಾರ್ಮರ್‌ರೊಬ್ಬರಿಂದ ಮಾಹಿತಿ ಪಡೆದ ಪೊಲೀಸರು, ವಾಟ್ಸಾಪ್ ಮೂಲಕ ಐಡಿ ಕಾರ್ಡ್ ಫೋಟೋ ತರಿಸಿಕೊಂಡು ಅದನ್ನು ವಿವಿಐಪಿ ವಿಭಾಗದಲ್ಲಿ ಪರಿಶೀಲನೆಗೆ ಒಳಪಡಿಸಿದ್ದರು. ಆಗ ಅದು ಫೇಕ್ ಎಂದು ಗೊತ್ತಾಗಿದೆ. ತಕ್ಷಣವೇ ಯುವಕನನ್ನು ಅರೆಸ್ಟ್ ಮಾಡಲಾಗಿದೆ, ಆತನಿಗೆ ಐಡಿ ಮಾಡಿಕೊಟ್ಟವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.