ಹುಡುಗಿ ಸಿಗಲಿ, RCB ಗೆಲ್ಲಲಿ, ಕುಂಭಮೇಳದಲ್ಲಿ ಯುವಕನ 7 ಡಿಮ್ಯಾಂಡ್‌ | ಗಾಂಜಾ ಕೇಸ್‌, ಅಪ್ಪ, ಮಗಳು, ಮೊಮ್ಮಗ ಅರೆಸ್ಟ್‌ | ಫಾಲ್ಸ್‌ನಲ್ಲಿ ಯುವಕ ಸಾವು

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 20, 2025 ‌‌ 

ಸುದ್ದಿ 1 |  ಚಿಕ್ಕಮಗಳೂರು ಜಿಲ್ಲೆಯ ಕಾಮೇನಹಳ್ಳಿ ಫಾಲ್ಸ್‌ನಲ್ಲಿ ಈಜಲು ಮುಂದಾಗಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಚೇತನ್ ಮೃತ ಯುವಕ. ಈಜುತ್ತಿದ್ದ ವೇಳೆ ತಲೆ ಬಂಡೆಗೆ ತಗುಲಿ ಯುವಕ ನೀರಿನಲ್ಲಿ ಮುಳುಗಿದ್ದು, ಬಳಿಕ ನಾಪತ್ತೆಯಾಗಿದ್ಧಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು , ಅರಣ್ಯ ಇಲಾಖೆಯ ಸಿಬ್ಬಂಧಿ ಯುವಕನ ಪತ್ತೆಗಾಗಿ ಹುಡುಕಾಟ ನಡೆಸಿದರು. 

 

ಸುದ್ದಿ 2 | ಕುಂಭಮೇಳಕ್ಕೆ ತೆರಳಿದ್ದ ಚಿಕ್ಕಮಗಳೂರು ಖಾಂಡ್ಯಾದ ಬಿದರೆ ಗ್ರಾಮದ ಯುವಕನೊಬ್ಬ ಏಳು ಬೇಡಿಕೆಗಳ ಪಟ್ಟಿ ಹಿಡಿದು, ಇವುಗಳು ಈಡೇರಬೇಕು ಎಂದು ಕುಂಭಮೇಳದಲ್ಲಿ ಪ್ರಾರ್ಥಿಸಿದ್ದಾನೆ. ಸದ್ಯ ಈತನ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಇನ್ನೂ ಈತನ ಬೇಡಿಕೆಯಲ್ಲಿ ಕುತೂಹಲಕಾರಿ ಅಂಶಗಳಿವೆ. ಹೆಣ್ಣು ಮಕ್ಕಳ ಮೇಲಿನ‌ ಅತ್ಯಾಚಾರ ನಿಲ್ಲಬೇಕು, 25 ವರ್ಷ ಮೇಲ್ಪಟ್ಟ ಹುಡುಗ, ಹುಡುಗಿಗೆ ಕಂಕಣಭಾಗ್ಯ ಸಿಗಬೇಕು, ಮಧ್ಯಮವರ್ಗದವರನ್ನು ಸರ್ಕಾರ ಗುರುತಿಸಬೇಕು, ಮಲೆನಾಡ ಒತ್ತುವರಿ ಸಮಸ್ಯೆ ಬಗೆಹರಿಯಲಿ, ಈ ಬಾರಿ ಆರ್ ಸಿಬಿ ಅಭಿಯಾನಿಗಳ ಆಸೆ ಈಡೇರಲಿ ಎಂದು ಬರೆದಿದ್ದಾರೆ.

 

Malenadu Today

 

ಸುದ್ದಿ 3 | ಇನ್ನೊಂದೆಡೆ ಅತ್ತ ಚಿಕ್ಕಬಳ್ಳಾಪುರದಲ್ಲಿ ಪೊಲೀಸರು ಆಂಧ್ರದಿಂದ ತರುತ್ತಿದ್ದ ಗಾಂಜಾವನ್ನು ಜಪ್ತಿ ಮಾಡಿದ್ದಷ್ಟೆ ಅಲ್ಲದೆ ಈ ಪ್ರಕರಣದಲ್ಲಿ ತಂದೆ, ಮಗಳು, ಮೊಮ್ಮಗ ಸೇರಿ ಐವರನ್ನ ಬಂಧಿಸಿದೆ. ಇಲ್ಲಿನ ಚಿಂತಾಮಣಿ ಕುರಟಹಳ್ಳಿ ಕ್ರಾಸ್‌ನಲ್ಲಿ ಮೊದಲೇ ಮಾಹಿತಿ ಪಡೆದು ಕಾದಿದ್ದ ಪೊಲೀಸರು ಈ ರೇಡ್‌ ನಡೆಸಿದ್ದಾರೆ. ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.

 

Malenadu Today

 

SUMMARY |  karnataka fast news 

KEY WORDS |    karnataka fast news 

Share This Article