SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗ ಹಳೇ ರೈಲ್ವೇ ನಿಲ್ದಾಣದ ಸಮೀಪ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಈತನ ಸುಳಿವು ಗುರುತಿಗಾಗಿ ರೈಲ್ವೆ ಪ್ರಕಟಣೆ ನೀಡಿದೆ. ಅದರ ವಿವರ ಹೀಗಿದೆ.
ಮೃತನು ಸುಮಾರು 5.2 ಅಡಿ ಎತ್ತರವಿದ್ದಾರೆ. ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 02 ಇಂಚು ಕಪ್ಪು ಕೂದಲು, ಉದ್ದ ಗಡ್ಡ ಮೀಸೆ ಬಿಟ್ಟಿರುತ್ತಾರೆ.
ಮೃತನು ಬಲಗಾಲು ಅಂಗವಿಕಲನಾಗಿದ್ದು, ಮುಸ್ಲಿಂ ಮತಸ್ಥನಂತೆ ಕಂಡುಬರುತ್ತಾನೆ. ಮೃತನು ನೇರಳೆ ಬಣ್ಣದ ತುಂಬು ತೋಳಿನ ಅಂಗಿ, ಬಿಳೀ ಬಣ್ಣದ ಬನಿಯನ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೂ.ಸಂ: 08182-222974, 948082124 ನ್ನು ಸಂಪರ್ಕಿಸಬಹುದೆಮದು ರೈಲ್ವೇ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
SUMMARY | The body of an unidentified man, aged between 35 and 40 years, was found near Shivamogga Old Railway Station. The railways has issued a notification for his identity. The details are as follows.
KEYWORDS | body of an unidentified man found, Shivamogga Old Railway Station, railways has issued a notification