SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 11, 2024 | SHIVAMOGGA JAIL | ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ತಮ್ಮ ಪತಿ ಫೋನ್ ಕಾಲ್ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುತ್ತಿರುವುದಾಗಿ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಒಂದರ ನಿವಾಸಿಯೊಬ್ಬರು ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 2023 ರಲ್ಲಿ ದಾಖಲಾದ ಪ್ರಕರಣವೊಂದದರ ಸಂಬಂಧ ವ್ಯಕ್ತಿಯೊಬ್ಬರನ್ನ ಚಿತ್ರದುರ್ಗ ಪೊಲೀಸರು ಅರೆಸ್ಟ್ ಮಾಡಿದ್ದರು. ಆನಂತರ ಆತನನ್ನ ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು.
ಈ ನಡುವೆ ಜೈಲಿನಲ್ಲಿದ್ದ ಆರೋಪಿ ತನ್ನ ಪತ್ನಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಹಾಕಿ ಮಾತನಾಡುತ್ತಾ ಸಾವಿರ, ಎರಡು ಸಾವಿರ ರೂಪಾಯಿ ಹಣ ಹಾಕು ಅಂತಾ ಡಿಮ್ಯಾಂಡ್ ಇಡುತ್ತಿದ್ದಾನಂತೆ. ಹೀಗೆ 10 ಕ್ಕೂ ಹೆಚ್ಚು ಪೋನ್ ನಂಬರ್‌ಗಳಿಂದ ಕರೆ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಸದ್ಯ ಪೊಲೀಸುರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
SUMMARY | A resident of a taluk in Chitradurga district has lodged a complaint alleging that her husband made a phone call from Shivamogga Central Jail and threatened her for money. A case has been registered at Tunganagar police station in Shivamogga.
KEYWORDS | Chitradurga district, husband made a phone call from Shivamogga Central Jail , Tunganagar police station in Shivamogga.