SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 8, 2024 | SHIVAMOGGA DASARA | ಶಿವಮೊಗ್ಗದಲ್ಲಿ ನಾಡಹಬ್ಬ ದಸರಾ 2024 ರ ಅಂಗವಾಗಿ ಇವತ್ತು ಸಹ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ಇವತ್ತು ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂಬುದನ್ನ ಗಮನಿಸುವುದಾದರೆ, ಅದರ ವಿವರ ಹೀಗಿದೆ.
ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಕಲಾ ದಸರಾದ ಅಂಗವಾಗಿ ನಗರದ ಶಿವಪ್ಪನಾಯಕರ ಅರಮನೆಯಲ್ಲಿ ದಸರಾ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
ಇನ್ನೂ ಕಲಾದಸರಾಕ್ಕೆ ಸಂಬಂಧಿಸಿದಂತೆ ಕಲಾ ಜಾಥಾ ನಡೆಯಲಿದೆ. ಈ ಜಾಥಾ ಶಿವಪ್ಪನಾಯಕ ವೃತ್ತದಿಂದ ಗಾಂಧಿಬಜಾರ್ ಮುಖಾಂತರ ಶಿವಪ್ಪನಾಯಕರ ಅರಮನೆ ತಲುಪಲಿದೆ. ಸಂಜೆ ಏಳು ಗಂಟೆಗೆ ಕಲಾ ದಸರಾದ ಸಮಾರೋಪ ಸಮಾರಂಭ ನಡೆಯಲಿದೆ


ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಪೌರ ಕಾರ್ಮಿಕರ ದಸರಾ ಅಂಗವಾಗಿ . ಜನಪದ ನೃತ್ಯ ಹಾಗೂ ಗೀತೆ 2. ಸೂಪರ್ ಮಿನಿಟ್ (ವಿಶಿಷ್ಟ ಆಟಗಳು) 3. ನೃತ್ಯ, ಹಾಡು, ಸಾಂಪ್ರದಾಯಕ ಉಡುಗೆ ಪ್ರದರ್ಶನ 4. ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ
ದಸರಾ ಅಂಗವಾಗಿ ಇವತ್ತಿನಿಂದ ಆಹಾರ ಮೇಳ ನಡೆಯಲಿದೆ. ಫ್ರೀಡಂಪಾರ್ಕ್ ಅಲ್ಲಮಪ್ರಭು ಮೈದಾನದಲ್ಲಿ ಇದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 25 ಸ್ಟಾಲ್ ಗಳಲ್ಲಿ ಸಾಂಪ್ರದಾಯಿಕ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳ ಪ್ರತಿ ದಿನ ಸಂಜೆ 6:00 ಗಂಟೆಯಿಂದ ತೆರೆದುಕೊಳ್ಳಲಿದೆ.
ರಂಗದಸರಾದ ಅಂಗವಾಗಿ ಇವತ್ತು ಸಂಜೆ ಏಳು ಗಂಟೆಯಿಂದ ಕುವೆಂಪು ರಂಗಮಂದಿರದಲ್ಲಿ ಪೌರಾಣಿಕ ನಾಟಕವೊಂದನ್ನ ಪ್ರದರ್ಶನ ಮಾಡಲಾಗುತ್ತಿದೆ.
SUMMARY | As part of Dasara 2024, Kala Dasara, Rangadasara, Pourakarmika Dasara, Photo Exhibition, Mythological Drama, Food Mela will be held in Shivamogga today. The programme will be held at Freedom Park, Kuvempu Rangamandira and Shivappa Nayaka Palace.
KEYWORDS | Dasara 2024, Kala Dasara, Rangadasara, Pourakarmika Dasara, Photo Exhibition, Mythological Drama, Food Mela ,Shivamogga today, Freedom Park, Kuvempu Rangamandira and Shivappa Nayaka Palace