SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 | YADUVEER KRISHNADATTA CHAMARAJA WADIYAR | ಸಂಸದರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಶಿವಮೊಗ್ಗಕ್ಕೆ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗಮಿಸಿದ್ದಾರೆ. ಶೆಟ್ಟರ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಆಗಮಿಸಿದ್ದು, ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ,
ಸಿದ್ದರಾಮಯ್ಯರವರು ಸಿಎಂ ಸ್ಥಾನ ದಲ್ಲಿದ್ರೆ ತನಿಖೆ ಸರಿಯಾಗಿ ನಡೆಯದು. ಹಾಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಲೆನಾಡಿಗೆ ಮೈಸೂರು ಸಂಸ್ಥಾನ ಅಪಾರ ಕೊಡುಗೆ ಇದೆ, ಮಹಾರಾಜರು ಪ್ರಾರಂಭಿಸಿದ ಅನೇಕ ಸಂಸ್ಥೆಗಳು ನೂರಾರು ವರ್ಷ ದಾಟಿ ಈಗಲೂ ನಾಗರೀಕರಿಗೆ ಯಶಸ್ವಿ ಸೇವೆ ನೀಡುತ್ತಿವೆ .ಮುಂದಿನ ಪೀಳಿಗೆಯ ಹಿತಾದೃಷ್ಟಿಯಿಂದ ಆನೇಕ ಯೋಜನೆ ರೂಪಿಸಿದ್ರು. ಯುವರಾಜ ಕಂಠಿರವ ನರಸಿಂಹ ರಾಜ ಒಡೆಯರ್ ಅವರನ್ನ ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕು ಅವರ ಅನೇಕ ದೊಡ್ಡ ಕೊಡುಗೆ ಈ ರಾಜ್ಯಕ್ಕಿದೆ ಎಂದು ಯದುವೀರ್ ತಮ್ಮ ಹಿರಿಯರನ್ನ ಸ್ಮರಿಸಿದರು.
ಪ್ರಧಾನಿ ಮೋದಿ ಅವರು ವಿಕಸಿತ ಭಾರತದ ಕನಸು ಹೊಂದಿದ್ದಾರೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯತಿಯಲ್ಲೂ ಒಂದು ಸಹಕಾರಿ ಸಂಘ ಸ್ಥಾಪನೆ ಆಗಬೇಕು. ಆಗ ಮಾತ್ರ ಪ್ರತಿಯೊಬ್ಬರು ಸ್ವಾವಲಂಬಿ ಬದುಕು ಸಾಗಿಸಬಹುದು. ಮಲೆನಾಡಿನ ಜನ ಪುಣ್ಯವಂತರು. ಇಲ್ಲಿನ ವಾತಾವರಣ ನನಗೆ ತುಂಬಾ ಇಷ್ಟ . ನಾಲ್ವಡಿ ಕೃಷ್ಣ ರಾಜ ಒಡೆಯರ್ ಮಲೆನಾಡಿನ ಅನೇಕ ಭಾಗಗಳಲ್ಲಿ ಆಗಿನ ಕಾಲದಲ್ಲಿಯೇ ಪ್ರವಾಸಿ ಮಂದಿರ ನಿರ್ಮಾಣ ಮಾಡಿದ್ರು. ಅವೆಲ್ಲವೂ ಈಗ ಆನೇಕ ಜನರಿಗೆ ನರೆವು ನೀಡಿವೆ ಎಂದು ಅಭಿಪ್ರಾಯ ಪಟ್ಟರು.