SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 22, 2024
ಶಿವಮೊಗ್ಗದಲ್ಲಿ ಹೋರಿ ಓಟಕ್ಕೆ ತನ್ನದೆ ಆದ ಟ್ರೆಂಡಿಂಗ್ ಇದೆ. ಅದರಲ್ಲಿಯು ಚಿತ್ರವಿಚಿತ್ರ ಹೆಸರುಗಳಿಂದ ಕರೆಯಲ್ಪಡುವ ಹೋರಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೇ ಫ್ಯಾನ್ಸ್ ಇರುತ್ತಾರೆ. ಹಾಗೆ ಹೆಸರು ಬಡೆದಿದ್ದ ಆಂಬುಲೆನ್ಸ್ ಹೋರಿ ಇವತ್ತು ಸಾವನ್ನಪ್ಪಿದೆ.
ಪ್ರೀತಿಪಾತ್ರ ಹೋರಿ ಆಂಬುಲೆನ್ಸ್ ನಿಧನ.
ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಇಟ್ಗೆಹಳ್ಳ ಗ್ರಾಮದ ಜನರ ಅಚ್ಚುಮೆಚ್ಚಿನ ಹೋರಿಯಾಗಿದ್ದ ಆಂಬುಲೆನ್ಸ್ ಹೆಸರಿನ ಹೋರಿ ಇವತ್ತು ಸಾವನ್ನಪ್ಪಿದೆ. ಕೆರೆಗೆ ಇಳಿದಿದ್ದ ಹೋರಿ ಅಲ್ಲಿಯೇ ಮುಳುಗಿ ಸಾವನ್ನಪ್ಪಿದೆ. ಇದರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
ಕೊಬ್ಬರಿ ಹೋರಿ, ಹಬ್ಬದ ಹೋರಿ ಅಂತಾನೆ ಸುತ್ತಮುತ್ತಲಿನ ಗ್ರಾಮ ಹಾಗೂ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದ ಈ ಆಂಬುಲೆನ್ಸ್ ಹೋರಿಗೆ ಸ್ನಾನ ಮಾಡಿಸಲು ಸಮೀಪದ ಗೌಡನ ಕೆರೆಗೆ ಕರೆದೊಯ್ದಲಾಗಿತ್ತು. ಕೆರೆಯಲ್ಲಿ ಸ್ನಾನ ಮಾಡಿಸುವಾಗ ಹೋರಿಯ ಕಾಲಿಗೆ ಜಡ್ಡು ಸಿಲುಕಿಕೊಂಡಿದೆ. ಕಾಲು ಅಲಗಾಡಿಸಲಾಗದೆ ಹೋರಿ ಈಜಲಾಗದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದೆ.
ಆಂಬುಲೆನ್ಸ್ ಹೋರಿಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಜಿಲ್ಲೆ ಹೊರ ಜಿಲ್ಲೆ ಎಲ್ಲೇ ಹೋರಿ ಬೆದರಿಸುವ ಸ್ಪರ್ಧೆ ನಡೆದರೂ, ಆಂಬುಲೆನ್ಸ್ ಅಲ್ಲಿ ಹಾಜರ್. ಈ ಹೋರಿಯ ಓಟಕ್ಕೆ ನಾಚಿ ನೀರಾದವರೇ ಹೆಚ್ಚು. ಆಂಬುಲೆನ್ಸ್ ಬರುವಾಗ ಹೇಗೆ ಜನರು ವಾಹನ ಸವಾರರು ರಸ್ತೆ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೋ..ಅದೇ ರೀತಿ ಆಂಬುಲೆನ್ಸ್ ಹೋರಿ ಓಟಕ್ಕಿತ್ತರೆ ಎಲ್ಲರೂ ಸೈಡ್ ಆಗಲೇಬಾಕಾಗಿತ್ತು.
ಅದರ ವೇಗಕ್ಕೆ ಕೊಬ್ಬರಿಯನ್ನು ಕೀಳಲಾದರೆ ಪೈಲ್ವಾನರು ಹೈರಾಣಾಗಿದ್ದುಂಟು.ನೂರಾರು ಸ್ಪರ್ಧೆಗಳಲ್ಲಿ ಗೆದ್ದಿರುವ ಆಂಬುಲೆನ್ಸ್ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಹೀಗಾಗಿಯೇ ಆಂಬುಲೆನ್ಸ್ ಗೆ ಅಭಿಮಾನಿ ಬಳಗ ಹೆಚ್ಚಿದೆ. ಆಂಬುಲೆನ್ಸ್ ಹೋರಿ ಅಗಲಿಕೆಯ ಸುದ್ದಿ ಕೇಳುತ್ತಿದ್ದಂತೆ ಸುತ್ತಮುತ್ತಲ ಅಭಿಮಾನಿಗಳು ಮನೆಯತ್ತೆ ಹೆಜ್ಜೆ ಹಾಕಿದರು. ಹಿಂದು ಸಂಪ್ರದಾಯದಂತೆ, ಹೇಗೆ ಮನುಷ್ಯ ಸತ್ತರೆ ಅಂತ್ಯಕ್ರೀಯೆ ನೆರವೇರಿಸುತ್ತಾರೋ ಹಾಗೆಯೇ ಆಂಬುಲೆನ್ಸ್ ಹೋರಿಯ ಅಂತ್ಯಕ್ರೀಯೆ ನೆರವೇರಲಿದೆ.