SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 14, 2024 shimoga city water supply
ಈಡಿಗ ವಧು–ವರರ ಸಮಾವೇಶ
ಬೆಂಗಳೂರು ನಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಇದೇ ಸೆಪ್ಟೆಂಬರ್ 22 ರಂದು ವಧುವರರ ಮುಖಾಮುಖಿ ಸಮಾವೇಶ ಹಮ್ಮಿಕೊಂಡಿದೆ. ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಈಡಿಗ ಭವನದಲ್ಲಿ ಈ ಸಮಾವೇಶ ನಡೆಯಲಿದೆ.
ಸೆ.22ರಂದು ಬೆಳಿಗ್ಗೆ ಬೆಳಿಗ್ಗೆ 11.30ಕ್ಕೆ ವಧುವರರ ಮುಖಾಮುಖಿ ಸಮಾವೇಶ ನಡೆಯಲಿದೆ. ಆಸಕ್ತ ವಧುವರರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಮಾಹಿತಿಯೊಂದಿಗೆ ಭಾಗವಹಿಸಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಟಿ. ಮೋಹನ್‌ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ: 080–23560574/48145442.
ಕೆಪಿಎಸ್‌ಸಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು ವಿವಿಧ ಇಲಾಖೆ ಗಳ ಗ್ರೂಪ್–ಬಿ ಹುದ್ದೆಗಳ ನೇಮಕಾತಿಗಾಗಿ ಸೆಪ್ಟೆಂಬರ್ 14,15 ಶನಿವಾರ ಭಾನುವಾರ ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕರ್ನಾಟಕ ಲೋಕ ಸೇವಾ ಆಯೋಗವು ಮುಂದೂಡಿದೆ. ಇದೇ ಹುದ್ದೆಗಳ ನೇಮಕಾತಿಗಾಗಿ ಇತರೆ ದಿನಾಂಕಗಳಲ್ಲಿ ನಡೆಯಬೇಕಿದ್ದ ವಿಷಯವಾರು ಪತ್ರಿಕೆಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ವಯೋಮಿತಿ ವಿಚಾರದಲ್ಲಿ ಸರ್ಕಾರ ಮೂರು ವರ್ಷ ಸಡಿಲಿಕೆ ನೀಡಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಗರಿಷ್ಠ ವಯೋಮಿತಿ ಮೂರು ವರ್ಷ ಸಡಿಲಿಕೆ ಅನ್ವಯವಾಗುವ ಅಭ್ಯ ರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಪೋಕ್ಸೊ ಪ್ರಕರಣ ಶಿವಮೂರ್ತಿ ಶರಣರ ಅರ್ಜಿ ವಜಾ
ಇತ್ತ ಬೆಂಗಳೂರುನಲ್ಲಿರು ಹೈಕೋರ್ಟ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ತೆಗೆದು ಹಾಕುವಂತೆ ನಿರ್ದೇಶನ ನೀಡುವಂತೆ ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಮನವಿಯನ್ನು ವಜಾಗೊಳಿಸಿದೆ.
ಈ ಕುರಿತಂತೆ ಶಿವಮೂರ್ತಿ ಶರಣರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ
https://news.google.com/publications/CAAqBwgKMLWipQwwx5q0BA?ceid=IN:en&oc=3