SHIVAMOGGA | MALENADUTODAY NEWS | Aug 21, 2024 ಮಲೆನಾಡು ಟುಡೆ
ಈ ಸಲ ಕರಾವಳಿಯ ಪ್ರಸಿದ್ಧ ಕಂಬಳ ಶಿವಮೊಗ್ಗದಲ್ಲಿಯು ನಡೆಯಲಿದೆ. ಇದಕ್ಕೆ ಬೇಕಿರುವ ವ್ಯವಸ್ಥಗಳನ್ನ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಈ ಸಂಬಂಧ ವಿಶೇಷ ಮಹಾಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಶಿವಮೊಗ್ಗ ಕಂಬಳ ಸಮಿತಿ ನೇತೃತ್ವದಲ್ಲಿ ಮಲೆನಾಡ ತುಂಗ-ಭದ್ರಾ ಜೋಡು ಕೆರೆ ಕಂಬಳವು ನಡೆಯಲಿದೆ.
ಮಲೆನಾಡು ತುಂಗ-ಭದ್ರಾ ಜೋಡು ಕೆರೆ ಕಂಬಳ
ಈ ಕಂಬಳವು ಬರುವ ವರ್ಷ ಏಪ್ರಿಲ್ 19 ಮತ್ತು 20 ರಂದು ನಡೆಯಲಿದೆ. ತೀರ್ಥಹಳ್ಳಿಯಲ್ಲಿರುವ ಹೆಗಲತ್ತಿ ಶ್ರೀ ನಾಗಯಕ್ಷಿ ದೇವಸ್ಥಾನ ಹಾಗೂ ಕೆಎಸ್ ಈಶ್ವರಪ್ಪನವರ ಸಹಕಾರದೊಂದಿಗೆ ಕಂಬಳ ನಡೆಯಲಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳ ಬೆಂಬಲದೊಂದಿಗೆ ಕಂಬಳ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಕಾಂತಾರ ಸಿನಿಮಾ ಪ್ರೇರಣೆ
ಕಂಬಳವನ್ನು ಕರಾವಳಿಯಿಂದ ಘಟ್ಟದ ಮೇಲೆ ಕೊಂಡೊಯ್ಯುವ ಪ್ರೇರಣೆ ಕಾಂತಾರ ಸಿನಿಮಾದಿಂದ ಎಂದು ಆಯೋಜಕರು ಹೇಳುತ್ತಾರೆ. ಈ ಮೊದಲು ಬೆಂಗಳೂರಿನಲ್ಲಿ ಕಂಬಳ ಯಶಸ್ವಿಯಾಗಿದ್ದು ಇದೀಗ ಶಿವಮೊಗ್ಗದಲ್ಲಿಯು ಅದೇ ರೀತಿಯಲ್ಲಿ ಕಂಬಳ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸದಲ್ಲಿದೆ ಆಯೋಜಕರ ತಂಡ
ಮಾಚೇನಹಳ್ಳಿಯಲ್ಲಿ ಕಂಬಳ
ಕಂಬಳ ನಡೆಸಲು ಪ್ರಮುಖವಾಗಿ ವಿಶೇಷವಾದ ಹಾಗೂ ದೊಡ್ಡ ಸ್ಥಳದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಜಾಗದ ವ್ಯವಸ್ಥೆ ಒದಗಿಸಿದ್ದಾರೆ. ಮಾಚೇನಹಳ್ಳಿಯಲ್ಲಿರುವ ಸ್ಥಳದಲ್ಲಿ ಕಂಬಳಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕಂಬಳಕ್ಕಾಗಿ ಕೆರೆ ನಿರ್ಮಾಣ ಮಾಡಬೇಕಿದ್ದು, ಕೋಣಗಳಿಗೆ ನೀರು ನೆರಳಿನ ವ್ಯವಸ್ಥೆ ಕಲ್ಪಿಸಿಬೆಕಿದೆ. ಇದೆಲ್ಲದಕ್ಕೂ ಅನುಕೂಲವಾಗುವ ನಿಟ್ಟಿನಲ್ಲಿ ಇಡೀ ಪ್ರದೇಶವನ್ನು ಮಾರ್ಪಾಡು ಮಾಡಬೇಕಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲಿ ಕಂಬಳ ಕಾರ್ಯದ ಭೂಮಿ ಪೂಜೆ ನಡೆಯಲಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ದಕ್ಷಿಣ ಕನ್ನಡದ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು ಬೆಂಗಳೂರು ಕಂಬಳದಂತೆ ಶಿವಮೊಗ್ಗ ಕಂಬಳವು ಯಶಸ್ವಿಯಾಗಲಿದೆ ಅಂತಾ ತಿಳಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಇನ್ನಷ್ಟು ಸುದ್ದಿಗಳು
-
ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್‌ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ