SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ
ಶಿವಮೊಗ್ಗದರಾದ ನಿರ್ಮಾಪಕಿ ಡಾ. ಸುಮಿತಾ ಪ್ರವೀಣ್ ಬಾನು ಅವರ ನಿರ್ಮಾಣದ ಟೆಕ್ವಾಂಡೋ ಗರ್ಲ್ ಸಿನಿಮಾ ರಾಜ್ಯಾದ್ಯಂತ ಇದೇ ಆಗಸ್ಟ್ 30 ರಂದು ರಿಲೀಸ್ ಆಗಲಿದೆ ಅಂತಾ ಚಿತ್ರತಂಡ ತಿಳಿಸಿದೆ. ಈ ಸಂಬಂಧ ಶಿವಮೊಗ್ಗದ ಪ್ರೆಸ್ ಟ್ರಸ್ಟ್ ನಲ್ಲಿ ಸುದ್ದಿಗೋಷ್ಟಿ ನಡೆಸಿದೆ ಚಿತ್ರತಂಡ ಸಿನಿಮಾದ ವಿಶೇಷತೆ ಬಗ್ಗೆ ವಿವರಿಸಿದೆ.
ಆತ್ರೇಯ ಕ್ರಿಯೇಶನ್ಸ್ ಅವರ ಚೊಚ್ಚಲ ನಿರ್ಮಾಣದ ಚಿತ್ರ ಇದಾಗಿದ್ದು, ಸಿನಿಮಾಕ್ಕೆ ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಸ್ವಯಂರಕ್ಷಣೆಯ ಕಲೆಗಾರಿಕೆಯ ಕುರಿತಾಗಿದ್ದು ಸುಮಾರು 200 ಮಕ್ಕಳು ಚಿತ್ರದ ಭಾಗವಾಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಡಾ.ಸುಮಿತ ಪ್ರವೀಣ್ ಭಾನು ಅವರ ಪುತ್ರಿ ಋತುಸ್ಪರ್ಶ ಸಿನಿಮಾದಲ್ಲಿ ಲೀಡ್ ರೋಲ್ ಮಾಡುತ್ತಿದ್ದು, ಟೈಕಾಂಡೋ ಕಲೆಯ ಸಾಧನೆಯ ಸಾಧ್ಯತೆಯನ್ನ ತೆರೆಯ ಮೇಲೆ ತರಲಾರಿಗೆ ಎಂದಿದ್ದಾರೆ. ಬ್ಲಾಕ್ ಬೆಲ್ಟ್ ಪಡೆದಿರುವ ಋತುಸ್ಪರ್ಶ ಈಗಾಗಲೇ ಆರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದು ತಮ್ಮದೇ ಆದ ಸಾಧನೆ ಮೆರೆದಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ