SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳ ಬಗೆಗಿನ ಸಂಕ್ಷಿಪ್ತ ವರದಿಯನ್ನ ಗಮನಿಸುವುದಾದರೆ. ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತು ಪತ್ತೆಯಾಗಿದೆ. ಪ್ಲಾಸ್ಟಿಕ್ ಕವರ್ ಒಂದರಲ್ಲಿ ಹುಲ್ಲಿನಿಂದ ಸುತ್ತಿದ ವಸ್ತು ಪತ್ತೆಯಾಗಿದ್ದು ಕಾರಾಗೃಹದ ರೂಮ್ 23 ರ ಬಳಿ ದೊರಕಿರುವ ಈ ವಸ್ತು ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರಡಿ ದಾಳಿ
ಬೆಳಗ್ಗೆ ಬರ್ಹಿದೆಸೆ ಹೋಗಿದ್ದ ಸಂದರ್ಭದಲ್ಲಿ ಕರಡಿಯೊಂದು ದಾಳಿ ನಡೆಸಿದ ಬಗ್ಗೆ ಭದ್ರಾವತಿ ತಾಲ್ಲೂಕು ಎಮ್ಮೆಹಟ್ಟಿ ಅರಸಿನಪುರದಲ್ಲಿ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಆನಂದಪ್ಪ ಎಂಬವರು ಗಾಯಗೊಂಡಿದ್ದು ಶಿವಮೊಗ್ಗದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಹಾಗೂ ಟಿಲ್ಲರ್ ಡಿಕ್ಕಿ
ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಹಾಗೂ ಟಿಲ್ಲರ್ ನಡುವೆ ಡಿಕ್ಕಿಯಾಗಿ ಟಿಲ್ಲರ್ ರಸ್ತೆಯಲ್ಲಿಯೇ ಪಲ್ಟಿಯಾದ ಬಗ್ಗೆ ತಡವಾಗಿ ವರದಿಯಾಗಿದೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ತೆರಳಿದ್ದ ಪೊಲೀಸರು ಎರಡು ವಾಹನಗಳನ್ನ ಠಾಣೆಗೆ ಶಿಫ್ಟ್ ಮಾಡಿಸಿದ್ದೃು. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. \

ಕುಡಿದ ಮತ್ತಿನಲ್ಲಿ ಮಾತ್ರೆ ನುಂಗಿದ ಪುಣ್ಯಾತ್ಮ
ಇತ್ತ ಭದ್ರಾವತಿ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮಾತ್ರೆಗಳನ್ನ ನುಂಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅದ್ವಾನ ಎಬ್ಬಿಸಿದ್ದ. ಅಸ್ವಸ್ಥಗೊಂಡ ಆತನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ