ಮನೆಯ ಬಳಿ ಬೆಕ್ಕು ನಾಯಿಗಳನ್ನು ಬಿಟ್ಟು ಹೋಗೋದು ನೋಡಿರ್ತೀರ, ಆದ್ರೆ ಈ ವ್ಯಕ್ತಿಗಳು ಮಾಡಿದ ಕೃತ್ಯವನ್ನು ನೋಡಿದ್ರೆ ಶಾಕ್​ ಆಗ್ತಿರ

ಶಿವಮೊಗ್ಗ : ಅಪರಿಚಿತ ವ್ಯಕ್ತಿಗಳು ಏಕಾ ಏಕಿ ಮನೆ ಹತ್ತಿರ ಬರೋದು ತಾವು ಸಾಕಿದ ಬೆಕ್ಕು ಅಥವಾ ನಾಯಿಯ ಮರಿಗಳನ್ನು ಇಟ್ಟು ಹೋಗೋದು ದನ ಕರುಗಳನ್ನು ಬಿಟ್ಟು ಹೋಗೋದನ್ನ ನೀವೆಲ್ಲಾ ನೋಡಿಯೇ ಇರ್ತೀರ. ಆದರೆ ಯಾರೋ ಅರಿಚಿತ ವ್ಯಕ್ತಿಗಳು ಏಕಾಏಕಿ ಮನೆಗೆ ನುಗ್ಗಿ ಕಾಂಪೌಂಡ್​​ ಒಳಗೆ  ವಿಷಪೋರಿತ ಹಾವನ್ನು ಮನೆಯೊಳಗೆ ಬಿಟ್ಟು ಪರಾರಿಯಾಗಿರುವ  ಸುದ್ದಿಯನ್ನು ಕೇಳಿದ್ದೀರಾ ಕೇಳಿಲ್ಲಾ ಅಂದ್ರೆ ಒಂದೊಮ್ಮೆ ಈ ಸುದ್ದಿಯನ್ನು ನೋಡಿ. ಇಂತಹದ್ದೊಂದು ವಿಚಿತ್ರ ಹಾಗೂ ಭಯಾನಕ ಘಟನೆ ಭದ್ರಾವತಿ ತಾಲೂಕಿನ ಪಿತಾರಿ ನಂಜಪ್ಪ ರಸ್ತೆಯಲ್ಲಿ ಸಂಭವಿಸಿದೆ.

ಶಿವಮೊಗ್ಗ : ಮರದ ಕೊಂಬೆಗಳನ್ನು ಕತ್ತರಿಸುವ ವೇಳೆ ವಿದ್ಯುತ್​ ಸ್ಪರ್ಶಿಸಿ ಕ್ರಿಕೆಟ್ ​ ಆಟಗಾರ ಸಾವು

ಘಟನೆಯ ವಿವರ

ಘಟನೆ ನಡೆದ ಸಮಯದಲ್ಲಿ ಯುವತಿಯೊಬ್ಬರು ಮನೆಯಲ್ಲಿ ಒಬ್ಬರೇ ಇದ್ದರು. ಆಕೆಯ ತಾಯಿ ಗಾರ್ಮೆಂಟ್ಸ್​​ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಯುವತಿಯ ಮನೆಯ ಬಳಿ ಬಂದಿದ್ದಾರೆ. ಬಂದು ಸುಮ್ಮನೆ ಹೋಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ, ಆ ಇಬ್ಬರು ವ್ಯಕ್ತಿಗಳು ಏಕಾಏಕಿ ಮನೆಯ ಕಾಂಪೌಂಡ್ ಒಳಗಡೆ ನುಗ್ಗಿದ್ದಾರೆ.ಮನೆಯ ಒಳಗಿನಿಂದಲೇ ಈ ಎಲ್ಲ ಚಟುವಟಿಕೆಗಳನ್ನು ಯುವತಿ ಭಯದಿಂದ ಗಮನಿಸುತ್ತಿದ್ದಳು. ಈ ಸಂದರ್ಭದಲ್ಲಿ ಆ ಯುವಕರು ತಮ್ಮ ಬಳಿಯಿದ್ದ ಚೀಲವನ್ನು ತೆರೆದು, ಅದರಲ್ಲಿದ್ದ ವಿಷಪೂರಿತ ಹಾವೊಂದನ್ನು ಕಾಂಪೌಂಡ್​ ಒಳಗಡೆ ಬಿಟ್ಟಿದ್ದಾರೆ. ಇದನ್ನು ನೋಡಿ ಗಾಬರಿಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾರೆ. ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಹೆದರಿದ ದುಷ್ಕರ್ಮಿಗಳು ತಕ್ಷಣವೇ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳ ಈ ಕೃತ್ಯದ ಸಂಪೂರ್ಣ ದೃಶ್ಯಾವಳಿಗಳು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಭದ್ರಾವತಿ ನ್ಯೂಟೌನ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shocking Incident in Bhadravathi