ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ! ಎಲೆಅಡಿಕೆ ಚೀಲದ ಜೊತೆ ಸಿಕ್ತು ಡಾಬು!

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 29 2025 :  ಭದ್ರಾವತಿ ತಾಲ್ಲೂಕು ಭದ್ರಾ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಪತ್ತೆಯಾಗಿದೆ. ಸೆಪ್ಟೆಂಬರ್ 26 ರಂದು ಪತ್ತೆಯಾದ ಮೃತದೇಹದ ಬಗ್ಗೆ  ಭದ್ರಾವತಿ ಔಲ್ಡ್ ಟೌನ್​ ಪೊಲೀಸ್ ಠಾಣಾ  ಪೊಲೀಸರು ಪ್ರಕಟಣೆಯನ್ನು ನೀಡಿದ್ದಾರೆ. 

ಇಲ್ಲಿನ ನಗರಸಭೆ ಮುಂಭಾಗದಲ್ಲಿ ಹರಿಯುವ ನದಿ ನೀರಿನಲ್ಲಿ ಮುಖ ಕೆಳಗೆ ಮಾಡಿ ಮಲಗಿದ್ದ ಸ್ಥಿತಿಯಲ್ಲಿ ಶವ ದೊರೆತಿದೆ. ಮೃತ ಮಹಿಳೆಗೆ ಸುಮಾರು 60 ರಿಂದ 70 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮಹಿಳೆಯು ಸರಿಸುಮಾರು 5 ಅಡಿ ಎತ್ತರ ಇದ್ದು, ತಲೆಯಲ್ಲಿ ಸುಮಾರು 6 ಇಂಚು ಉದ್ದದ ಬಿಳಿ ಕೂದಲು ಇತ್ತು. ಮೃತದೇಹವು ಕೆಂಪು ಸೀರೆ ಮತ್ತು ಕಪ್ಪು ಜಾಕೇಟ್ ಧರಿಸಿತ್ತು. ಅಲ್ಲದೆ, ಸೊಂಟಕ್ಕೆ ಡಾಬು ಮತ್ತು ಎಲೆ ಅಡಿಕೆ ಇಡಲು ಬಳಸುವ ಕಪ್ಪು ಬಣ್ಣದ ಒಂದು ಸಣ್ಣ ಚೀಲ ಮೃತದೇಹದ ಜೊತೆಯಲ್ಲಿ ಪತ್ತೆಯಾಗಿದೆ.

- Advertisement -
Police Arrest Man for Assault Attempt Within an Hour of Complaint
news image Unidentified Womans Body 

ಮೃತ ಮಹಿಳೆಯ ಎಡಗೈಯಲ್ಲಿ ತಾಮ್ರದ ರೀತಿಯ ಬಳೆ ಮತ್ತು ತೋರು ಬೆರಳಿನಲ್ಲಿ ಅದೇ ತಾಮ್ರದಂತಹ ಉಂಗುರ ಇರುವುದು ಕಂಡುಬಂದಿದೆ. ನೀರಿನಲ್ಲಿ ಬಹಳಷ್ಟು ಕಾಲ ಇದ್ದುದರಿಂದ, ಶವದ ಎರಡು ಕಾಲುಗಳು, ಕೈಗಳು, ಕಣ್ಣುಗಳು, ಮುಖ, ಮೂಗು ಹಾಗೂ ಎದೆಯ ಭಾಗಗಳು ಕೊಳೆತು ಚರ್ಮ ಸುಲಿದು ಹೋಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಈ ಅನಾಮಧೇಯ ಮಹಿಳೆಯ ಮೃತದೇಹದ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ, ಇಲ್ಲವೇ ವಾರಸುದಾರರು ಪತ್ತೆಯಾದರೆ, ಕೂಡಲೇ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಸಬ್‌ಇನ್ಸಪೆಕ್ಟರ್ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.  

Bhadravati news Basaveshwara Statue 25 Unidentified Womans Body
Bhadravati news Basaveshwara Statue 25 Unidentified Womans Body 

ಇದನ್ನು ಸಹ ಓದಿ  ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Unidentified Womans Body Found in Bhadra River, Bhadravathi Police

Share This Article
Leave a Comment

Leave a Reply

Your email address will not be published. Required fields are marked *