ಒಂದೆ ದಿನ 2 ಅಪಘಾತ : ಬಚ್ಚಗಾರಲ್ಲಿ ಬಸ್ ಆಕ್ಸಿಡೆಂಟ್! ನಡೆದಿದ್ದೇನು?​

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 29 2025 : ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಿನ್ನೆ ದಿನ ಎರಡು ದುರ್ಘಟನೆಗಳು ಸಂಭವಿಸಿದೆ. ಸಿಗಂದೂರು ತೆರಳುತ್ತಿದ್ದ ಟಿಟಿ ಆಕ್ಸಿಡೆಂಟ್ ಆಗಿ ಬೆಂಗಳೂರು ಮೂಲದ 12 ಮಂದಿ ಗಾಯಗೊಂಡ ಘಟನೆ  ಒಂದು ಕಡೆಯಾದರೆ, ಇತ್ತ  ಕಾರ್ಗಲ್‌ನಿಂದ ಸಾಗರ ಪಟ್ಟಣದ ಕಡೆಗೆ ಬರುತ್ತಿದ್ದ ಒಂದು ಖಾಸಗಿ ಬಸ್  ನಿಯಂತ್ರಣ ತಪ್ಪಿ ಮೋರಿಕಟ್ಟೆಗೆ ಬಡಿದು ತಗ್ಗಿಗೆ ವಾಲಿಕೊಂಡ ಘಟನೆ ಸಂಭವಿಸಿದೆ. 

ಇಲ್ಲಿನ ಬಚ್ಚಗಾರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಮೋರಿ ಕಟ್ಟೆಗೆ ಬಸ್​ ಅಪ್ಪಳಿಸಿದ್ದು, ಘಟನೆಯಲ್ಲಿ 8 ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಗೆ ಬಸ್​ನ ಸ್ಟೇರಿಂಗ್ ಜಾಮ್ ಆಗಿದ್ದು ಕಾರಣ ಎನ್ನಲಾಗಿದೆ. ಇನ್ನೂ  ಘಟನೆ ಬೆನ್ನಲ್ಲೆ ವಿಷಯ ತಿಳಿದು ಸ್ಥಳಕ್ಕೆ ಬಂದ  ಹೈವೇ ಪೆಟ್ರೋಲ್ ಸಿಬ್ಬಂದಿ ಮಂಜುನಾಥ್ ಮತ್ತು ಶಿವಾನಂದ್ ಗಾಯಾಳುಗಳನ್ನ ಸಂತೈಸಿ ಆಸ್ಪತ್ರೆಗೆ ಶಿಪ್ಟ್ ಮಾಡಿಸಿ ಚಿಕಿತ್ಸೆ ಒದಗಿಸಿದ್ದಾರೆ. ಸಕಾಲದಲ್ಲಿ ಗಾಯಾಳುಗಳ ನೆರವಿಗೆ ಬಂದ ಪೊಲೀಸ್ ಸಿಬ್ಬಂದಿಗೆ ಎಸ್​ಪಿ ಮಿಥುನ್​ ಕುಮಾರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Eight Injured as Private Bus Hits Culvert Near Bacchagaru, Sagar
Eight Injured as Private Bus Hits Culvert Near Bacchagaru, Sagar

Eight Injured as Private Bus Hits Culvert Near Bacchagaru, Sagar

 Sagar bus accident today, Bacchagaru bus crash, private bus steering jam, Kargal to Sagar bus accident, how bus accidents happen, ಸಾಗರ ಬಸ್ ಅಪಘಾತ, ಬಚ್ಚಗಾರು ಮೋರಿ ಕಟ್ಟೆ, 8 ಜನರಿಗೆ ಗಾಯ, ಖಾಸಗಿ ಬಸ್ ಅಪಘಾತ, ಸ್ಟೇರಿಂಗ್ ಜಾಮ್, ಹೈವೇ ಪ್ಯಾಟ್ರೋಲ್ ನೆರವು, Sagar bus accident, Bacchagaru crash, Private bus accident, Bus steering failure, 8 injured, Highway Patrol

ಇದನ್ನು ಸಹ ಓದಿ  ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Leave a Comment