ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ 12 2025 : ಸೊರಬ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದರಲ್ಲಿ 38 ಕುರಿಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಬಂಗಾರಪ್ಪ ಸ್ಟೇಡಿಯಂ ಬಳಿ ಮೇಯಲು ಹೋಗಿದ್ದ 38 ಕುರಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವನೆಯಿಂದ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ನಾಲ್ಕು ಕುರಿಗಳು ಸಾವನ್ನಪ್ಪುವ ಸ್ಥಿತಿಯಲ್ಲಿವೆ. ಕುರಿಗಳ ಹಿಂಡು ಬೆಳಗಾವಿಯ ಖಡಕಲಾಟ ಗ್ರಾಮದ ಸುರೇಶ ಬೀರಾ ಅವಡಖಾನ ಎಂಬವರಿಗೆ ಸೇರಿದ್ದಾಗಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಪಶು ವೈದ್ಯರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಕಳೆದ ಬುಧವಾರ 12, ಗುರುವಾರ 26 ಕುರಿಗಳು ಸಾವನ್ನಪ್ಪಿವೆ. ವೈದ್ಯರ ಪ್ರಕಾರ, ಕುರಿಗಳು ಗಳಲೆ ರೋಗ, ಕರಳು ಬೇನೆ ಅಥವಾ ನೀಲಿ ನಾಲಿಗೆ ಕಾಯಿಲೆಯಿಂದ ಸಾವನ್ನಪ್ಪಿರುವ ಅಥವಾ ಸಸಿಮಡಿಯ ನೀರು ಕುಡಿಯುವುದರಿಂದಲೂ ಸಾವು ಸಂಭವಿಸಿರಬಹುದು ಎನ್ನಲಾಗಿದೆ.

38 Sheep Die in Soraba
Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Sheep Die in Soraba
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!