dam deatiles : ಲಿಂಗನಮಕ್ಕಿ ಹಾಗೂ ತುಂಗಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಇವತ್ತು
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು,ಲಿಂಗನಮಕ್ಕಿ ಹಾಗೂ ತುಂಗಾ ಜಲಾಶಯದ ನೀರಿನ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಲಿಂಗನಮಕ್ಕಿ ಜಲಾಶಯ
ಜಲಾಶಯಕ್ಕೆ 9196 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, ಒಟ್ಟು 8988 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಪೆನ್‌ಸ್ಟಾಕ್‌ಗಳ ಮೂಲಕ 3641.28 ಕ್ಯೂಸೆಕ್ಸ್, ಸ್ಲೂಸ್ ಮೂಲಕ 4553 ಕ್ಯೂಸೆಕ್ಸ್ ಮತ್ತು ಹೆಚ್ಚುವರಿಯಾಗಿ 801 ಕ್ಯೂಸೆಕ್ಸ್ ನೀರನ್ನು ಹೊರಹರಿಸಲಾಗುತ್ತಿದೆ.
ಜಲಾಶಯದ ಒಟ್ಟು ಲೈವ್ ಸಾಮರ್ಥ್ಯ 151.64 ಟಿಎಂಸಿ ಇದ್ದು, ಪ್ರಸ್ತುತ 144.95 ಟಿಎಂಸಿ (ಶೇ. 95.58) ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಜಲಾಶಯದ ಪ್ರದೇಶದಲ್ಲಿ 2.0 ಮಿ.ಮೀ. ಮಳೆಯಾಗಿದೆ.
ತುಂಗಾ ಜಲಾಶಯ
ಜಲಾಶಯಕ್ಕೆ ಒಟ್ಟು 9198 ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಉತ್ಪತ್ತಿ ಕಾಲುವೆಯಿಂದ 1218 ಕ್ಯೂಸೆಕ್ಸ್ ಮತ್ತು ಎಡದಂಡೆ ಕಾಲುವೆಯಿಂದ 275 ಕ್ಯೂಸೆಕ್ಸ್ ನೀರು ಸೇರಿದೆ.
