ಬೆಂಗಳೂರು-ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್! ರೂಟ್, ಟಿಕೆಟ್​ ದರ ತಿಳಿದುಕೊಳ್ಳಿ

ajjimane ganesh

Bengaluru-Sigandur Non AC Sleeper Bus route  ಶಿವಮೊಗ್ಗ, malenadu today news : August 23 2025  ಸಿಗಂದೂರು ಸೇತುವೆ ಆದ ಬೆನ್ನಲ್ಲೆ ಈ ಭಾಗಕ್ಕೆ ಇನ್ನಷ್ಟು ಬಸ್​ಗಳ ಸಂಪರ್ಕ ಕಲ್ಪಿಸಬೇಕು ಎಂಬ ಮಾತುಗಳು ಕೇಳಿಬಂದಿತ್ತು. ಈ ಬೇಡಿಕೆಯ ಬೆನ್ನಲ್ಲೆ ಕೆಎಸ್​ಆರ್​ಟಿಸಿ ಸಿಗಂದೂರಿಗೆ ಬೆಂಗಳೂರಿನಿಂದ ನಾನ್​ ಎಸಿ ಬಸ್​ವೊಂದನ್ನ ಕಲ್ಪಿಸಿದೆ. ಈ ಬಗ್ಗೆ ಕೆಎಸ್​ಆರ್​ಟಿಸಿಯಿಂದಲೇ ಪ್ರಕಟಣೆ ಹೊರಬಿದ್ದಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರು ಮತ್ತು ಸಿಗಂದೂರು ನಡುವೆ ಹೊಸದಾಗಿ ನಾನ್ ಎಸಿ ಸ್ಲೀಪರ್ ಬಸ್​ (Non AC Sleeper Bus) ಪ್ರಾರಂಭಿಸಿದೆ. ನಿನ್ನೆಯಿಂದಲೇ ಅಂದರೆ  22-08-2025 ರಿಂದಲೇ ಬಸ್ ಕಾರ್ಯಾಚರಣೆ ಆರಂಭಿಸಿದೆ. 

- Advertisement -
Non AC Sleeper Bus health tips by malenadu today Shimoga railway crossing closure information Big Win for GST Dues july 24 Explore Important announcement july 16 ಕರ್ನಾಟಕ, ವಿದ್ಯಾರ್ಥಿವೇತನ, ಕೈಗಾರಿಕೆ ಯೋಜನೆಗಳು, ವಿದ್ಯಾರ್ಥಿನಿಲಯ ಪ್ರವೇಶ, ಶಿವಮೊಗ್ಗ, ಸಾಗರ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಆನ್‌ಲೈನ್ ಅರ್ಜಿ, ಪ್ರಕಟಣೆ, ಸರ್ಕಾರಿ ಯೋಜನೆಗಳು, Karnataka, Scholarships, Industrial Schemes, Hostel Admissions, Shivamogga, Sagara, Social Welfare, Backward Classes, Online Applications, Government Announcements, Deadlines ,#KarnatakaUpdates #StudentAid #BusinessGrants #HostelLife #ApplyOnline #GovernmentSchemes #EducationKarnataka #ShivamoggaNews suvarna news information news
suvarna news information news

ನಾನ್ ಎಸಿ ಸ್ಲೀಪರ್ ಬಸ್ ಬಸ್​ ರೂಟ್​  

ಕೆಎಸ್​ಆರ್​ಟಿಸಿಯ ಹೊಸ ಬಸ್ ಬೆಂಗಳೂರಿನಿಂದ ಹೊರಟು ವಯಾ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಮತ್ತು ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸಿಗಂದೂರನ್ನು ತಲುಪಲಿದೆ. ಇನ್ನೂ ಬಸ್​ನ ಸಮಯವನ್ನು ಗಮನಿಸುವುದಾದರೆ, ಬೆಂಗಳೂರಿನಿಂದ ಬಸ್​ ರಾತ್ರಿ 9:40ಕ್ಕೆ ಹೊರಡಲಿದೆ. ಸಿಗಂದೂರನ್ನು ಬೆಳಗ್ಗೆ  6:00ಗಂಟೆ ತಲುಪಲಿದೆ. ಈ ಕಡೆಯಿಂದ ಅಂದರೆ, ಸಿಗಂದೂರು ಕಡೆಯಿಂದ ರಾತ್ರಿ 8:00 ಗಂಟೆಗೆ ಹೊರಡಲಿದ್ದು, ಬೆಂಗಳೂರಿಗೆ ಬೆಳಗಿನ ಜಾವ 4:15 ಕ್ಕೆ ತಲುಪಲಿದೆ. ಟಿಕೆಟ್​ ದರ ₹950 ನಷ್ಟಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಕೆಎಸ್​ಆರ್​ಟಿಸಿ ಈ ಬಸ್ ಸೇವೆಯನ್ನು ಉಪಯೋಗಿಸಿಕೊಂಡು ತಮ್ಮ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕ ಮಾಡಿಕೊಳ್ಳಬಹುದು ಎಂದಿದೆ. ಅಲ್ಲದೆ  ಟಿಕೆಟ್‌ಗಳನ್ನು KSRTC ಯ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಮತ್ತು www.ksrtc.karnataka.gov.in ಮೂಲಕ ಕಾಯ್ದಿರಿಸಬಹುದು ಎಂದು ತಿಳಿಸಿದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ 080-26252625, 7760990100,7760990560, 7760990287 ನಂಬರ್​ಗಳನ್ನು ಸಂಪರ್ಕಿಬಹುದು ಅಂತಾ ತಿಳಿಸಿದೆ. 

KSRTC Launches Bengaluru-Sigandur Non AC Sleeper Bus ,Bengaluru-Sigandur Non AC Sleeper Bus route
KSRTC bus service, Bengaluru to Sigandur bus, Non AC sleeper bus, Book KSRTC sleeper bus ticket, ಕೆಎಸ್‌ಆರ್‌ಟಿಸಿ, ಬೆಂಗಳೂರು ಸಿಗಂದೂರು ಬಸ್, ನಾನ್ ಎಸಿ ಸ್ಲೀಪರ್

car decor new

Share This Article
2 Comments

Leave a Reply

Your email address will not be published. Required fields are marked *