shivamogga sp instruction to festival ಶಿವಮೊಗ್ಗ, malenadu today news : August 20 2025 : ಶಿವಮೊಗ್ಗ ಪೊಲೀಸ್ ಇಲಾಖೆ ಹಬ್ಬಗಳಿಗೆ ನಿರಂತರ ಸಿದ್ದತೆಗಳನ್ನು ನಡೆಸಿದೆ. ಇದರ ನಡುವೆ ಸರಣಿಯಾಗಿ ನಡೆಸ್ತಿರುವ ಶಾಂತಿಸಭೆಯಲ್ಲಿ ಪೊಲೀಸ್ ಇಲಾಖೆ ಒಂದಲ್ಲ ಒಂದು ಹೊಸ ವಿಚಾರಗಳನ್ನು ಹೇಳುತ್ತಿದೆ. ಈ ನಡುವೆ ಇವತ್ತು ದಿನಾಂಕಃ 20-08-2025 ರಂದು ಡಿಎಆರ್ ಸಭಾಂಗಣದಲ್ಲಿ ನಡೆಸಿದ ಪ್ರಮುಖ ಸಭೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ಮಹತ್ವದ ಮತ್ತೊಂದು ಸೂಚನೆ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಇದನ್ನು ಸಹ ಓದಿ : 15 ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪೇಪರ್ ಬ್ಲಾಷ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ https://malenadutoday.com/ganesh-chaturthi/

ಎಸ್ಪಿ ಮಿಥುನ್ ಕೂಡ್ ನೀಡಿರುವ ಸೂಚನೆ /shivamogga sp instruction to festival
- ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಂತಿಸಭೆಗಳನ್ನು ನಡೆಸಲಾಗುತ್ತಿದ್ದು, ಜನರ ಸಹಕಾರ ಎಂದಿನಂತೆ ನಿರೀಕ್ಷಿಸುತ್ತೇವೆ
- ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಸಮಾಜದ ಪ್ರಮುಖ ಮುಖಂಡರುಗಳಿಗೆ ನಾಯಕಯತ್ವವನ್ನು ನೀಡಲಾಗಿದೆ.
- ಯಾವುದೇ ಸಮಸ್ಯೆಗಳಾಗದಂತೆ ಸ್ಥಳೀಯ ಮುಖಂಡರು ಮುಂದಾಳತ್ವ ವಹಿಸುತ್ತಾರೆ ಎಂಬ ನಂಬಿಕೆ ಇದೆ
- ಯಾವುದೇ ನಿರ್ಬಂಧಗಳನ್ನು ಹಾಕುವುದು ನಮ್ಮ ಉದ್ದೇಶ ಅಲ್ಲ , ಬದಲಾಗಿ ಸಾಮೂಹಿಕವಾಗಿ ಹಬ್ಬವನ್ನು ಆಚರಣೆ ಸಂಬಂಧ ಸೂಚನೆಗಳನ್ನು ನೀಡುತ್ತಿದ್ದೇವೆ
- ಈದ್ -ಮಿಲಾದ್ ನಲ್ಲಿ ಪ್ರತ್ಯೇಕವಾಗಿ Rally ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪ್ರತೀ ಮೆರವಣಿಗೆಗೂ ಸಿಬ್ಬಂದಿ ನಿಯೋಜಿಸಲಾಗುತ್ತದೆ.
- ಹಿಂದೂ ಮಹಾಸಭಾ ಗಣಪತಿ ಮೆರೆವಣಿಗೆ ಸಮಯದಲ್ಲಿ ಮಫ್ತಿಯಲ್ಲಿ ಸಿಬ್ಬಂದಿ ಇರುತ್ತಾರೆ.
- ಮೆರವಣಿಗೆ ವೇಳೆ ಕೆಲವರು ಕಟ್ಟಡಗಳ ಮೇಲೆ ಹತ್ತುವ ಇಳಿಯುವ ಪ್ರಯತ್ನ ಮಾಡುತ್ತಾರೆ ಅಂತವರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಬೇಕಾಗುತ್ತದೆ
- ಈದ್-ಮಿಲಾದ್ ಕಮಿಟಿಯಿಂದ ಅಥವಾ ಗಣಪತಿ ಮಂಡಳಿಯಿಂದ ಪ್ರತೀ ಬಾರಿ 5 ರಿಂದ 6 ಜನ ಸ್ವಯಂಸೇವಕರನ್ನು ನೀವು ನಿಯೋಜನೆ ಮಾಡಲಾಗುತ್ತದೆ.
- ಈಸಲವೂ ಸ್ವಯಂಸೇವಕರನ್ನು ನಿಯೋಜಿಸಲಾಗುತ್ತಿದ್ದು, ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ
- ಆರ್ಗನೈಸ್ ಮಾಡುವ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ( ಮೈಕ್ ಸಿಸ್ಟಮ್) ನಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದಂತೆ ನೋಡಿಕೊಳ್ಳಬೇಕು
- ನಮ್ಮ ಇಲಾಖೆಯ ಅಧಿಕಾರಿಗಳೂ ಸಹ ಮೈಕ್ ಸಿಸ್ಟಮ್ ಬಳಕೆ ಮಾಡಿಕೊಳ್ಳುವ ಹಾಗೆ ಇರಬೇಕು ನಾವು ಕೊಡುವ ಸಲಹೆ ಸೂಚನೆಗಳು 200 ರಿಂದ 300 ಮೀಟರ್ ವರೆಗೂ ಕೇಳಿಸುವ ಹಾಗೆ ಇರಬೇಕು.
- ಈ ಬಾರಿ ಕಡ್ಡಾಯವಾಗಿ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು
- ರಾಜ್ಯದ ವಿವಿಧ ಭಾಗಗಳಿಂದ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ನೇಮಕ ಮಾಡಲಾಗುತ್ತಿದೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ.