Railway news :ಭಾರತೀಯ ರೈಲ್ವೆ ಇಲಾಖೆ ಇನ್ಮುಂದೆ ರೈಲಿನಲ್ಲಿ ಸಾಗಿಸುವ ಲಗೇಜ್ ಬ್ಯಾಗ್‌ಗೆ ತೂಕದ ಮಿತಿಯನ್ನು ನಿರ್ಧರಿಸುವ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಇಂತಿಷ್ಟೇ ಲಗೇಜ್ಗಳನ್ನು ತೂಕ ಮಾಡಿಸಿ ತೆಗೆದುಕೊಂಡು ಹೋಗಬೇಕೆಂಬ ನಿಯಮವಿದೆ. ಇದೀಗ ಅದೇ ನಿಯಮವನ್ನು ರೈಲ್ವೇ ಇಲಾಖೆ ಸಹ ಜಾರಿಗೆ ತರಲು ನಿರ್ಧರಿಸಿದೆ ಎನ್ನಲಾಗಿದೆ. ಇನ್ಮುಂದೆ ಪ್ರಯಾಣಿಕರು ತಮ್ಮ ಲಗೇಜುಗಳನ್ನು ರೈಲ್ವೇ ಪ್ಲಾಟ್ಫಾರ್ಮ್ಗಳಿಗೆ ತೆಗೆದುಕೊಂಡು ಹೋಗುವ ಮುನ್ನ ಎಲೆಕ್ಟ್ರಿಕ್ ತೂಕದಲ್ಲಿ ತೂಕವನ್ನು ಚೆಕ್ ಮಾಡಿಸಿಕೊಂಡು ಹೋಗಬೇಕು. ರೈಲಿನ ವಿವಿಧ ಧರ್ಜೆಯ ವಿಭಾಗಗಳಿಗೆ ಇಂತಿಷ್ಟು ತೂಕದ ಮಿತಿಯನ್ನು ನಿಗದಿಪಡಿಸಲಾಗಿದ್ದು. ತೂಕದ ಮಿತಿ ನಿಗದಿಗಿಂತ ಹೆಚ್ಚಿದ್ದರೆ ಪ್ರಯಾಣಿಕರು ತಮ್ಮ ಲಗೇಜಿಗೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
Railway news : ಯಾವ್ಯಾವ ದರ್ಜೆಗೆ ಎಷ್ಟಿದೆ ತೂಕ ನಿಗದಿ
ರೈಲಿನ ದರ್ಜೆಗಳ ಅನುಸಾರವಾಗಿ ತೂಕದ ಮಿತಿ ಬದಲಾಗುತ್ತದೆ. ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಇನ್ನುಳಿದಂತೆ ಸಾಮಾನ್ಯ ದರ್ಜೆಯಲ್ಲಿ 35 ಕೆ.ಜಿ ಕೊಂಡೊಯ್ಯಬಹುದಾಗಿದೆ.
ಆರಂಭದಲ್ಲಿ ಪ್ರಯಾಗ್‌ರಾಜ್ ಜಂಕ್ಷನ್, ಪ್ರಯಾಗರಾಜ್ ಛೋಕಿ, ಸುಬೇದರ್‌ಗಂಜ್, ಕಾನ್ಪುರ್ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ್ ಜಂಕ್ಷನ್, ಗೋವಿಂದಪುರಿ ಸೇರಿದಂತೆ ಎನ್‌ಸಿಆರ್ ವಲಯದ ಅಡಿಯಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ತೂಕ ಮಾಡಿಸಿದ ನಂತರವೇ ಪ್ಲಾಟ್‌ಫಾರ್ಮ್‌ಗೆ ತೆರಳಲು ಅನುಮತಿಯಿರುತ್ತದೆ., 2026ರ ಡಿಸೆಂಬರ್‌ನಿಂದ ಇದು ಅನ್ವಯಿಸಲಿದೆ.

ಇದನ್ನೂ ಓದಿ :ಡೆವಿಲ್ ಚಿತ್ರದ ಇದ್ರೆ ನೆಮ್ದಿಯಾಗ್ ಇರ್ಬೇಕು ಸಾಂಗ್ ರಿಲೀಸ್ಗೆ ಹೊಸ ಡೇಟ್ ಫಿಕ್ಸ್ https://malenadutoday.com/darshan-devil-movie-first-simgle/