Kanthara character : ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಇದರ ಮಧ್ಯೆ ಚಿತ್ರತಂಡವು ಪ್ರಮುಖ ಪಾತ್ರಗಳನ್ನು ಒಂದೊಂದಾಗಿ ಬಹಿರಂಗಪಡಿಸುತ್ತಿದೆ. ಇತ್ತೀಚೆಗೆ ‘ಕನಕವತಿ’ ಪಾತ್ರವನ್ನು ಪರಿಚಯಿಸಿದ್ದ ಚಿತ್ರತಂಡ, ಈಗ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಅವರ ಪಾತ್ರವನ್ನು ರಿವೀಲ್ ಮಾಡಿದೆ.
ಹೌದು ಚಿತ್ರತಂಡ ಈಗ ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ಗುಲ್ಶನ್ ದೇವಯ್ಯ ‘ಕುಲಶೇಖರ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ಬೆಂಗಳೂರಿನವರಾದ ಗುಲ್ಶನ್, ಈ ಹಿಂದೆ ‘ಸೈತಾನ್’ ಹಂಟರ್’ ಮತ್ತು ‘ಕಮಾಂಡೋ 3’ ಸೇರಿದಂತೆ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ‘ಕಾಂತಾರ ಚಾಪ್ಟರ್ 1’ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸುತ್ತಿದ್ದಾರೆ.

ಪೋಸ್ಟರ್ನಲ್ಲಿ ಗುಲ್ಶನ್ ದೇವಯ್ಯ ಅವರ ರಾಜನ ವೇಷಭೂಷಣ ಗಮನ ಸೆಳೆಯುತ್ತಿದೆ. ಇದು ಒಂದು ಸಂಸ್ಥಾನದ ರಾಜನ ಪಾತ್ರವಿರಬಹುದು ಎಂದು ಊಹಿಸಲಾಗಿದೆ. ಈ ಹಿಂದೆ ಚಿತ್ರತಂಡವು ಈ ಸಿನಿಮಾ ಕದಂಬರ ಕಾಲದ ಕಥೆಯನ್ನು ಆಧರಿಸಿದೆ ಎಂದು ಹೇಳಿತ್ತು. ರುಕ್ಮಿಣಿ ವಸಂತ್ ಅವರ ‘ಕನಕವತಿ’ ಪಾತ್ರವನ್ನೂ ರಾಣಿಯಂತೆ ಪರಿಚಯಿಸಲಾಗಿತ್ತು. ಇದೀಗ ‘ಕುಲಶೇಖರ’ನ ಪಾತ್ರವನ್ನೂ ರಾಜನಾಗಿ ತೋರಿಸಿರುವುದು ಕುತೂಹಲ ಮೂಡಿಸಿದೆ.
‘ಕಾಂತಾರ ಚಾಪ್ಟರ್ 1’ ಅಕ್ಟೋಬರ್ 2ರಂದು ವಿಶ್ವಾದ್ಯಂತ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Kanthara character
