Man Drowns in Gowdanakere Ayanuru ಆಯನೂರು, ಶಿವಮೊಗ್ಗ, malenadu today news : ಆಯನೂರು ಸಮೀಪ ಸಿಗುವ ಗೌಡನ ಕೆರೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಸುದ್ದಿ ಬಂದಿದೆ. ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಗಮನಿಸುವುದಾದರೆ, ಆಯನೂರಿನ ಗೌಡನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ 25 ವರ್ಷದ ಯುವಕ ಕುಂಸಿ ಗ್ರಾಮದ ನಿಶಾಂತ್ (Nishanth) ಸಾವನ್ನಪ್ಪಿದ್ದಾರೆ.
ನಿನ್ನೆ ಅಂದರೆ, ಮಂಗಳವಾರ ಬೆಳಿಗ್ಗೆ 6 ಗಂಟೆಗೆ ನಿಶಾಂತ್ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಮನೆಯಿಂದ ಬೈಕ್ನಲ್ಲಿ ಹೊರಟಿದ್ದರು. ಅಲ್ಲಿಂದ ಗೌಡನಕೆರೆಗೆ ಬಂದಿದ್ದ ಅವರು ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಮನೆಯವರು ನಿಶಾಂತ್ನನ್ನು ಹುಡುಕಿಕೊಂಡು ಕೆರೆಯ ಬಳಿ ಹೋಗಿದ್ದಾರೆ. ಅಲ್ಲಿ ನಿಶಾಂತ್‌ನ ಬೈಕ್ ಮತ್ತು ಚಪ್ಪಲಿಗಳು ಪತ್ತೆಯಾಗಿದ್ದವು. ಹಾಗಾಗಿ ಇನ್ನಷ್ಟು ಆತಂಕಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ನಡೆಸಿ ನಿಶಾಂತ್ರ ಮೃತದೇಹ ಪತ್ತೆ ಮಾಡಿದ್ದಾರೆ. ಈ ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (case registered) ದಾಖಲಾಗಿದೆ.

Man Drowns in Gowdanakere Ayanuru
Kumsi incident, Goudanakere tragedy, Nishanth death, Ayanur news, Shivamogga district news, ಗೌಡನಕೆರೆ ದುರಂತ, ಯುವಕ ಸಾವು, ನಿಶಾಂತ್, ಶಿವಮೊಗ್ಗ ಸುದ್ದಿ, ಪೊಲೀಸ್ ಪ್ರಕರಣ, fishing accident, Kumsi news, Gowdanakere tragedy, #Shivamogga #Drowning #YoungManDeath
