ತಾಳಗುಪ್ಪ – ಯಶವಂತಪುರ ರೈಲು ಸಮಯ ಬದಲಾವಣೆ

prathapa thirthahalli
Prathapa thirthahalli - content producer

Talaguppa-Yeshvantpur train :  ತಾಳಗುಪ್ಪ – ಯಶವಂತಪುರ ರೈಲು ಸಮಯ ಬದಲಾವಣೆ

ತಾಳಗುಪ್ಪ ಮತ್ತು ಯಶವಂತಪುರ ನಡುವೆ ಸಂಚರಿಸುವ ರೈಲು (ಸಂಖ್ಯೆ 06588) ವೇಳಾಪಟ್ಟಿಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಪ್ರಮುಖ ಬದಲಾವಣೆ ಮಾಡಿದೆ. ಈ ಹೊಸ ವೇಳಾಪಟ್ಟಿ ಆಗಸ್ಟ್ 9, 2025 ರಿಂದ ಜಾರಿಗೆ ಬರಲಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ರೈಲು ತಾಳಗುಪ್ಪದಿಂದ ಬೆಳಗ್ಗೆ 10:00 ಗಂಟೆಗೆ ಹೊರಡಲಿದೆ. ಈ ಹಿಂದೆ ರೈಲು ಬೆಳಗ್ಗೆ 8:15ಕ್ಕೆ ಹೊರಡುತ್ತಿತ್ತು. ನಂತರ ಈ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಬೆಳಗ್ಗೆ 11:55ಕ್ಕೆ ಆಗಮಿಸಿ, 12:00 ಗಂಟೆಗೆ ಹೊರಡಲಿದೆ. ಬಳಿಕ ಭದ್ರಾವತಿಗೆ ಮಧ್ಯಾಹ್ನ 12:20, ತರೀಕೆರೆಗೆ ಮಧ್ಯಾಹ್ನ 12:38, ಅರಸೀಕೆರೆಗೆ ಮಧ್ಯಾಹ್ನ 02:00 ಮತ್ತು ತುಮಕೂರುಗೆ ಮಧ್ಯಾಹ್ನ 03:43ಕ್ಕೆ ತಲುಪಲಿದೆ. ಅಂತಿಮವಾಗಿ, ರೈಲು ಯಶವಂತಪುರ ನಿಲ್ದಾಣವನ್ನು ಸಂಜೆ 07:15ಕ್ಕೆ ತಲುಪಲಿದೆ.

Share This Article